ಹೋಮಿಯೋಪಥಿ ಚಿಕಿತ್ಸೆಯಲ್ಲಿ ವಿಶ್ವಾಸ ಅವಶ್ಯ‘ಕುಡ್ಲ ಹೋಮೀಯೊಕಾನ್ 2024’ ಉದ್ಘಾಟಿಸಿ ಸ್ಪೀಕರ್ ಯು.ಟಿ.ಖಾದರ್

mng-june30 Homeocon
Published on

ಮಂಗಳೂರು: ಹೋಮೀಯೊಪತಿ ಔಷಧಿಗೆ ಅದರದ್ದೇ ಆದ ಮಹತ್ವವಿದ್ದು, ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವಾಗಬೇಕು ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.


ಭಾರತೀಯ ಹೋಮೀಯೊಪತಿ ವೈದ್ಯರ ಸಂಘ (ಐಎಚ್‌ಎಂಎ) ಕರ್ನಾಟಕ ಘಟಕದ ನೇತೃತ್ವದಲ್ಲಿ ಭಾನುವಾರ ‘ಕುಡ್ಲ ಹೋಮೀಯೊಕಾನ್ 2024’ ರಾಷ್ಟ್ರೀಯ ಹೋಮೀಯೊಪತಿ ಸಮ್ಮೇಳನ ಮತ್ತು ವೈಜ್ಞಾನಿಕ ವಿಚಾರ ಸಂಕಿರಣ ಉದ್ಘಾಟಿಸಿ, ಅವರು ಮಾತನಾಡಿದರು.


ನಾನು ಆರೋಗ್ಯ ಸಚಿವನಾಗಿದ್ದಾಗ ನಮ್ಮ ಚಿಕಿತ್ಸಾ ಪದ್ದತಿಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಿದ್ದೇನೆ. ಒಂದೇ ಕ್ಯಾಂಪಸ್ಸಿನಲ್ಲಿ ಎಲ್ಲಾ ಚಿಕಿತ್ಸಾ ಪದ್ದತಿಗಳು ಸಿಗುವಂತೆ ಆಗಬೇಕು. ಅ ಮೂಲಕ ಜನರು ತಮಗೆ ಬೇಕಾದ ಪದ್ದತಿಯನ್ನು ಬಳಸಿಕೊಳ್ಳುವಂತಾಗಬೇಕು. ಮುಂದಿನ ದಿನಗಳಲ್ಲಿ ಸರ್ಕಾರದ ಜತಗೆ ಸಭೆ ನಡೆಸಿ ಹೋಮೀಯೊಪತಿ ಪದ್ದತಿಗೆ ಬೇಕಿರುವ ಪ್ರೋತ್ಸಾಹ ನೀಡುವಲ್ಲಿ ಶ್ರಮ ವಹಿಸುತ್ತೇನೆ ಎಂದರು.


ಭಾರತೀಯ ಹೋಮೀಯೊಪತಿ ವೈದ್ಯರ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ. ಉವೈಸೆ ಕೆ.ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಹೋಮೀಯೊಪತಿ ವೈದ್ಯರ ಸಂಘದ ನೂತನ ವೆಬ್‌ಸೈಟ್ ಲೋಕಾರ್ಪಣೆಗೊಳಿಸಲಾಯಿತು.


ಆಯುಷ್ ಇಲಾಖೆ ಉಪನಿರ್ದೇಶಕ ಡಾ.ಅಶ್ವಥ್ ನಾರಾಯಣ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಎಂ. ವಿವೇಕ್ ಆಳ್ವ, ಾದರ್ ಮುಲ್ಲರ್ ಶಿಕ್ಷಣ ಸಂಸ್ಥೆಯ ನಿಯೋಜಿತ ನಿರ್ದೇಶಕ ಾ.ಾಸ್ಟಿನ್ ಎಲ್.ಲೋಬೊ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಮೊಹಮ್ಮದ್ ಇಕ್ಬಾಲ್, ಐಎಚ್‌ಎಂಎ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಧೀರಜ್ ಸ್ಯಾಮುಯೆಲ್, ರಾಷ್ಟ್ರೀಯ ಕಾರ್ಯದರ್ಶಿ ಡಾ.ಅವಿನಾಶ್ ವಿ.ಎಸ್., ಐಎಚ್‌ಎಂಎ ಕರ್ನಾಟಕ ಘಟಕದ ಅಧ್ಯಕ್ಷ ಡಾ.ಪ್ರವೀಣ್ ರಾಜ್ ಆಳ್ವ, ಪ್ರಧಾನ ಕಾರ್ಯದರ್ಶಿ ಡಾ.ಪ್ರವೀಣ್ ಕುಮಾರ್ ರೈ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net