ಮೂಲ ಸೌಲಭ್ಯ ಕಲ್ಪಿಸಲು ಶಾಸಕರು ಬದ್ಧ

dj clk haligondanahalli
Published on

ಚಳ್ಳಕೆರೆ: ನಿರಾಶ್ರಿತರ ಸಮಸ್ಯೆ ಪರಿಹರಿಸಲು ಶಾಸಕ ಟಿ.ರಘುಮೂರ್ತಿ ಬದ್ಧರಾಗಿದ್ದು, ಮೊದಲ ಹಂತದಲ್ಲಿ ಕೊಳವೆಬಾವಿ ಕೊರೆಯಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಗುಜ್ಜಾರಪ್ಪ ಹೇಳಿದರು.

ಹಾಲಿಗೊಂಡನಹಳ್ಳಿ ನಿರಾಶ್ರಿತರು ಗುಡಿಸಲು ನಿರ್ಮಿಸಿಕೊಂಡಿರುವ ಹೊರಭಾಗ ಗೋಮಾಳದಲ್ಲಿ ಮಂಗಳವಾರ ಕೊಳವೆಬಾವಿ ಕೊರೆಯಿಸಲು ಚಾಲನೆ ನೀಡಿ ಮಾತನಾಡಿದರು.

ಇಲ್ಲಿನ ನಿವಾಸಿಗಳು ಯಾವುದೇ ರೀತಿ ಭೀತಿ ಪಡಬೇಕಿಲ್ಲ. ಶಾಸಕರು ನಿಮ್ಮ ರಕ್ಷಣೆಗೆ ಬದ್ಧರಾಗಿದ್ದಾರೆ. ಕಾನೂನಿನಡೆ ನಿಮಗೆ ಎಲ್ಲ ರೀತಿ ಸೌಲಭ್ಯ ಕೊಡಿಸಲು ಪ್ರಯತ್ನಿಸಲಿದ್ದಾರೆ ಎಂದು ಭರವಸೆ ನೀಡಿದರು.

ಗ್ರಾಪಂ ಮಾಜಿ ಅಧ್ಯಕ್ಷ ಬಿ.ತಿಪ್ಪೇಸ್ವಾಮಿ, ಫಲಾನುಭವಿಗಳಾದ ಮಚ್ಚಪ್ಪ, ರುದ್ರಪ್ಪ, ದುರುಗೇಶ, ಗಂಗಮ್ಮ, ಪೂಜಾರಿ ಸಣ್ಣಪ್ಪ, ಎಂ.ಸಿದ್ದಯ್ಯ, ಎಸ್.ತಿಪ್ಪೇಸ್ವಾಮಿ, ರೇಣುಕಮ್ಮ, ಶಿವಮ್ಮ, ಚಂದ್ರಕಲಾ, ಭೀಮೇಶ್, ರೂಪಮ್ಮ, ಹನುಮಂತರಾಯ, ಕವಿತಾ, ಪರಮೇಶಿ, ಅನಿತಾ, ಅಕ್ಷತಾ, ಲಕ್ಷ್ಮೀದೇವಿ, ಓಬಳೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net