ಸೂರು ಕಲ್ಪಿಸಲಿ ಕಾರ್ಮಿಕ ಇಲಾಖೆ: ಕಂಪ್ಲಿಯಲ್ಲಿ ಫೆಡರೇಷನ್ ತಾಲೂಕು ಘಟಕ ಪ್ರತಿಭಟನೆ

021221 Kampli Homeless Residence Protest
ಕಂಪ್ಲಿಯ ಡಾ.ಅಂಬೇಡ್ಕರ್ ವೃತ್ತದಲ್ಲಿ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ ಪ್ರತಿಭಟನೆ ನಡೆಸಿತು.
Published on

ಕಂಪ್ಲಿ: ತಾಲೂಕಿನ ನಿವೇಶನರಹಿತ ನೋಂದಾಯಿತ ಕಾರ್ಮಿಕರಿಗೆ ಸೂರು ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ತಾಲೂಕು ಘಟಕ ಗುರುವಾರ ಕಾರ್ಮಿಕ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ಅಧ್ಯಕ್ಷ ಐ.ಹೊನ್ನೂರುಸಾಬ್ ಮಾತನಾಡಿ, ನಿವೇಶನರಹಿತ ಅರ್ಹ ಕಾರ್ಮಿಕರನ್ನು ಗುರುತಿಸಿ ಗೃಹ ಸೌಲಭ್ಯ ಒದಗಿಸಬೇಕು. ಕಾರ್ಮಿಕರ ಮಕ್ಕಳ ಮದುವೆ ಸಹಾಯಧನವನ್ನು ಒಂದು ಲಕ್ಷ ರೂ.ಗೆ ಏರಿಕೆ, ಅಪಘಾತ ಮರಣ ಪರಿಹಾರದ ಮೊತ್ತ ಹತ್ತು ಲಕ್ಷ ರೂ.ಗೆ ಏರಿಕೆ, ನಿವೇಶನ ಇರುವ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ 5ಲಕ್ಷ ರೂ.ಗಳ ಸಹಾಯಧನ ನೀಡಬೇಕು. ಶೈಕ್ಷಣಿಕ ಧನ ಸಹಾಯವನ್ನು ಸೇವಾಸಿಂಧು ಪೋರ್ಟಲ್ ಮೂಲಕ ನೀಡಬೇಕೆಂದು ಒತ್ತಾಯಿಸಿದರು.

ಸಿಐಟಿಯು ಕಂಪ್ಲಿ ತಾಲೂಕು ಸಂಚಾಲಕ ಬಂಡಿ ಬಸವರಾಜ್, ಫೆಡರೇಷನ್ ಪದಾಧಿಕಾರಿಗಳಾದ ಆರ್.ನಾಗರಾಜ, ಎನ್.ರಾಜಾಭಕ್ಷಿ, ಸುಂಕಪ್ಪ, ಯರ‌್ರಿಸ್ವಾಮಿ, ಇಬ್ರಾಹಿಂ, ಹೊನ್ನಮ್ಮ, ಮೇಸ್ತ್ರಿ ಕುಂಜಿ ರಾಮಣ್ಣ, ಮೇಸ್ತ್ರಿ ಎನ್.ನಾಗರಾಜ್, ಕಂಪಿಲರಾಯ ಎಲೆಕ್ಟ್ರಿಷಿಯನ್ ಮತ್ತು ್ಲಂಬರ್ ಅಸೋಸಿಯೇಷನ್ ಅಧ್ಯಕ್ಷ ವಿ.ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net