ಹೋಮಿಯೋಪಥಿ ಅಡ್ಡಪರಿಣಾಮವಿಲ್ಲದ ಉತ್ತಮ ವೈದ್ಯಕೀಯ ಪದ್ಧತಿ

Nandi Homeio Day
Published on

ತಜ್ಞ ಡಾ.ಶರಣಕುಮಾರ ಕಂಠಿ ಅಭಿಮತ | ನಂದಿ ಕ್ಲಿನಿಕ್‌ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದಿದ ವಿಶ್ವ ಹೋಮಿಯೋಪಥಿ ದಿನಾಚರಣೆ

ಕಲಬುರಗಿ: ಹೋಮಿಯೋಪಥಿಯೋ ಯಾವುದೇ ಅಡ್ಡಪರಿಣಾಮಗಳಿಲ್ಲದ, ಬಹುತೇಕ ಎಲ್ಲಾ ಕಾಯಿಲೆಗಳಿಗೆ ಸೂಕ್ತ ಪರಿಣಾಮಕಾರಿಯಾದ ಚಿಕಿತ್ಸೆ ಹೊಂದಿರುವ, ರೋಗ ಮುಕ್ತತೆ ಹೊಂದಿ ಜೀವನ ನಿರ್ವಹಣೆಗೆ ಪೂರಕವಾದ ವಿಶೇಷ ಚಿಕಿತ್ಸಾ ವಿಧಾನವಾಗಿದೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡುವುದು ಪ್ರಸ್ತುತ ದಿನಗಳಲ್ಲಿ ಹೆಚ್ಚು ಅಗತ್ಯವಾಗಿದೆ ಎಂದು ಹೋಮಿಯೋಪಥಿ ತಜ್ಞ ಡಾ.ಶರಣಕುಮಾರ ಕಂಠಿ ಅಭಿಮತಪಟ್ಟರು.
ನಗರದ ಗೋವಾ ಹೋಟೆಲ್ ಸಮೀಪವಿರುವ ‘ನಂದಿ ಹೋಮಿಯೋ ಕ್ಲಿನಿಕ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಬುಧವಾರ ಜರುಗಿದ ‘ವಿಶ್ವ ಹೋಮಿಯೋಪಥಿ ದಿನಾಚರಣೆ’ಯಲ್ಲಿ ‘ಹೋಮಿಯೋಪಥಿ ಪಿತಾಮಹ’ ಹ್ಯಾನಮನ್‌ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ನಂತರ ಅವರು ಮಾತನಾಡುತ್ತಿದ್ದರು.
ಹೋಮಿಯೋಪಥಿ ಚಿಕಿತ್ಸೆ ಡಾ.ಹ್ಯಾನಮನ್ ಅವರ ದೀರ್ಘ ಸಂಶೋಧನೆಯ ಫಲವಾಗಿ ೧೭೫೬ರಲ್ಲಿ ಪದ್ಧತಿ ಉದಯವಾಗಿದೆ. ಇದರ ಬಗ್ಗೆ ನಿಧಾನ ಮತ್ತು ದೀರ್ಘಾವಧಿ, ಸಂಪೂರ್ಣ ಚಿಕಿತ್ಸೆ ಅಸಾಧ್ಯ, ಅಡ್ಡಪರಿಣಾಮಗಳಿಂದ ಮುಕ್ತವಾಗಿಲ್ಲವೆಂಬ ಕೆಲವು ತಪ್ಪು ಕಲ್ಪನೆಗಳಿವೆ. ‘ಸಾಮ್ಯವು-ಸಾಮ್ಯವನ್ನು ಗುಣಪಡಿಸುತ್ತದೆ’ ಎಂಬ ತತ್ವ ಇದರಲ್ಲಿ ಒಳಗೊಂಡಿದೆ. ಅಂದರೆ ಯಾವುದು ರೋಗ ಉಂಟುಮಾಡುತ್ತದೆಯೋ, ಅದನ್ನೇ ಔಷಧಿಯನ್ನಾಗಿ ಶಾಸ್ತಿçÃಯವಾಗಿ ರೋಗಿಯ ಮೇಲೆ ಪ್ರಯೋಗಿಸುವ ಮೂಲಕ ಸಂಪೂರ್ಣ ಚಿಕಿತ್ಸೆಯನ್ನು ಮಾಡುವ ಗುಣ ಹೋಮಿಯೋಪಥಿ ಹೊಂದಿದೆ ಎಂದರು.
ಹೋಮಿಯೋಪಥಿ ಪದ್ದತಿಯು ಸಮಾಜಸೇವೆಯನ್ನು ಹೊಂದಿದ್ದು, ಇದರಲ್ಲಿ ವ್ಯಾಪಾರೀಕರಣ ಸಲ್ಲದು. ಈ ಕೋರ್ಸ್ ಆಯ್ಕೆ ಮಾಡಿಕೊಂಡು ಪದವಿ ಪಡೆದು, ಮುಂದೆ ವೈದ್ಯಕೀಯ ವೃತ್ತಿ ಜೀವನ ಇದನ್ನೇ ಮುಂದುವರೆಸಬೇಕು. ಹೋಮಿಯೋಪಥಿ ಪದ್ಧತಿಯ ಬಗ್ಗೆ ಅಪನಂಬಿಕೆ ಮೂಡುವಂತಹ ಕೆಲಸವಾಗಬಾರದೆಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಹಾಗೂ ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಕ.ರಾ.ಪ್ರಾ.ಶಾ.ಶಿ.ಸಂಘದ ಜಿಲ್ಲಾ ಉಪಾಧ್ಯಕ್ಷ ಪರಮೇಶ್ವರ ಬಿ.ದೇಸಾಯಿ, ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕ ಪ್ರಕಾಶ ಸರಸಂಬಿ, ಕ್ಲಿನಿಕ್‌ನ ಕಿರಿಯ ವೈದ್ಯೆ ಡಾ.ಸ್ವಾತಿ ಗೊಳ್ಳೆ, ಸಿಬ್ಬಂದಿ ಅನುಷಾ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net