ಗೃಹರಕ್ಷಕರಿಗೆ ಆರ್ಥಿಕ ಸಹಾಯ, ವಿಜಯವಾಣಿ ವರದಿಗೆ ಮಾನವೀಯ ಸ್ಪಂದನೆ

homegourd new
Published on

ಬ್ರಹ್ಮಾವರ: ಪೊಲೀಸ್ ಇಲಾಖೆಯೊಂದಿಗೆ ಅಲ್ಪ ಗೌರವಧನಕ್ಕೆ ದುಡಿಯುವ ಗೃಹ ರಕ್ಷಕ ದಳದ ಸಿಬ್ಬಂದಿಯ ನೆರವಿಗೆ ವಿಜಯವಾಣಿ ಓದುಗ, ಬ್ರಹ್ಮಾವರದ ಉದ್ಯಮಿ ಬಿರ್ತಿ ರಾಜೇಶ್ ಶೆಟ್ಟಿ ಮತ್ತು ಅವರ ಸ್ನೇಹ ಬಳಗ ಸ್ಪಂದಿಸಿದೆ.

ವಿಜಯವಾಣಿ ಶುಕ್ರವಾರದ ಸಂಚಿಕೆಯಲ್ಲಿ ಜಿಲ್ಲೆಯ ಗೃಹರಕ್ಷಕರ ಬವಣೆ ಬಗ್ಗೆ ವಿಶೇಷ ವರದಿ ಪ್ರಕಟಿಸಿತ್ತು. ಈ ವರದಿ ಗಮನಿಸಿದ ರಾಜೇಶ್ ಶೆಟ್ಟಿ ಅವರು ತಮ್ಮ ಸ್ನೇಹ ಬಳಗದೊಂದಿಗೆ ಗೃಹರಕ್ಷಕರ ನೆರವಿಗೆ ಕ್ರಮ ಮುಂದಾದರು,

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಗುರುನಾಥ್ ಬಿ.ಹಾದಿಮನೆ ಅವರ ಮೂಲಕ ಬ್ರಹ್ಮಾವರದಲ್ಲಿ ಕೆಲಸ ನಿರ್ವಹಿಸುವ 14 ಮಂದಿ ಗೃಹರಕ್ಷಕರಿಗೆ ತಲಾ ಎರಡು ಸಾವಿರ ರೂಪಾಯಿಯಂತೆ ಆರ್ಥಿಕ ನೆರವು ನೀಡಿದರು.

ಹೋಂಗಾರ್ಡ್ ಕಮಾಂಡೆಂಟ್ ಸ್ಟೀವನ್ ಪ್ರಕಾಶ್, ಠಾಣಾ ಸಿಬ್ಬಂದಿ, ಗೃಹರಕ್ಷಕ ದಳದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net