ವೃದ್ಧೆಯನ್ನು ಕೂಡಿ ಹಾಕಿ ದರೋಡೆ: ಕಲಬುರಗಿಯಲ್ಲಿ ಒಂಟಿ ಮನೆ ಟಾರ್ಗೆಟ್​

Crime Logo
Published on

ಕಲಬುರಗಿ: ಮನೆಯಲ್ಲಿ ಅಜ್ಜಿ ಒಬ್ಬಂಟಿಯಾಗಿದ್ದ ವೇಳೆ ಹಲ್ಲೆ ಮಾಡಿ, ಕೋಣೆಯಲ್ಲಿ ಕೂಡಿ ಹಾಕಿ ಅವರ ಮೈಮೆಲ್ಲಿದ್ದ ಚಿನ್ನಾಭರಣ ದೋಚಿಕೊಂಡು ಹೋದ ಟನೆ ನಗರದ ವಿಠಲನಗರದ ೨ನೇ ಕ್ರಾಸ್​ನ ಸಿಕಂದರ ಮಸೀದಿ ಎದುರಿನ ಮನೆಯೊಂದರಲ್ಲಿ ನಡೆದಿದೆ. ಡಾ.ಚಂದ್ರಕಾಂತ ನಾಗಲೀಕರ (೫೬) ಅವರ ಮನೆಯಲ್ಲಿ ಕಳ್ಳತನ ನಡೆದಿದೆ.

ವೈದ್ಯರಾಗಿರುವ ಚಂದ್ರಕಾಂತ ನಾಗಲೀಕರ ಅವರು ಸಂಜೆ ೮ಗಂಟೆಗೆ ತಮ್ಮ ಸ್ವಂತ ಕ್ಲಿನಿಕ್​ಗೆ ಹೋಗಿದ್ದಾರೆ. ಹೋಗುವ ಮುನ್ನ ಬಾಗಿಲು ಭದ್ರವಾಗಿ ಹಾಕಿಕೊಳ್ಳುವಂತೆ ತಾಯಿ ಗುರುಬಾಯಿ ನಾಗಲೀಕರ ಅವರಿಗೆ ತಿಳಿಸಿದ್ದಾರೆ. ಈ ಮಧ್ಯೆ ಚಂದ್ರಕಾಂತ ಸಹೋದರಿ ಕರೆ ಮಾಡಿ, ತಾಯಿ ಜತೆ ಮಾತನಾಡುವ ಒಮ್ಮೆಲೆ ಚೀರಾಡುವ ಶಬ್ದ ಕೇಳಿ ಬಂದಿದೆ. ನಂತರ ಕರೆ ಮಾಡಿದರೂ ಕೇಳುತ್ತಿಲ್ಲ ಎಂದು ತಿಳಿಸಿದ್ದಾಳೆ. ಆಗ ಮನೆಗೆ ಬಂದು ನೋಡಿದಾಗ ತಾಯಿಯೂ ಬೆಡ್​ರೂಮ್​ನ ಬಾತ್​ರೂಮನಲ್ಲಿ ಇದ್ದು, ಬಾಗಿಲ ಕೊಂಡಿ ಹೊರಗಿನಿಂದ ಹಾಕಲಾಗಿತ್ತು.

ಆಗ ತಾಯಿಯನ್ನು ವಿಚಾರಿಸಿದ್ದು, ಟಿವಿ ನೋಡುತ್ತ ಕುಳಿತಾಗ ಸ್ವಲ್ಪ ಬಾಗಿಲು ತೆಗೆದಿದ್ದು, ಸಂಜೆ ೮.೩೦ರ ವೇಳೆಗೆ ಪುತ್ರಿ ಉಷಾಬಾಯಿ ಕರೆ ಮಾಡಿ, ಮಾತಾಡುವ ವೇಳೆ ವ್ಯಕ್ತಿಯೊಬ್ಬ ಮುಖಕ್ಕೆ ಬಟ್ಟೆ ಕಟ್ಟಿ ಬಂದು, ಬಾಯಿ ಒತ್ತಿ ಹಿಡಿದು, ಕೊರಳಲ್ಲಿ ಇದ್ದ ೪೦ ಗ್ರಾಂ ಚೈನ್​, ಕೈಯಲ್ಲಿದ್ದ ೩೦ ಗ್ರಾಂನ ಬಂಗಾರದ ಬಿಲ್ವಾರ ಬಳೆ ಕಿತ್ತುಕೊಂಡು ಹೋಗಿದ್ದಾನೆ. ತಾಯಿ ಕುತ್ತಿಗೆಗೆ ಗಾಯವಾಗಿದ್ದು, ಹಲ್ಲು ಮುರಿದಿದೆ. ಈ ಕುರಿತು ಬ್ರಹ್ಮಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net