ಅನಧಿಕೃತ ಹೋಂ ಸ್ಟೇಗಳ ನೋಂದಣಿಗೆ 1 ತಿಂಗಳ ಅಂತಿಮ ಗಡುವು

udp-20-home stay
Published on

ಉಡುಪಿ: ಪ್ರಸಕ್ತ ಜಿಲ್ಲೆಯಲ್ಲಿ 200 ಅಧಿಕೃತ ಹೋಂ ಸ್ಟೇಗಳು ಕಾರ್ಯನಿರ್ವಹಿಸುತ್ತಿವೆ. ಇದನ್ನೂ ಹೊರತು ಪಡಿಸಿಯೂ ಅನೇಕ ಹೋಂ ಸ್ಟೇಗಳಿರುವುದು ಜಿಲ್ಲಾಡಳಿತ ಗಮನಕ್ಕೆ ಬಂದಿದೆ. ಒಂದೂವರೆ ವರ್ಷದಿಂದ ನೋಂದಣಿ ಮಾಡಿಸಿಕೊಳ್ಳುವಂತೆ ಸೂಚನೆ ನೀಡಿದ್ದರೂ ರ್ನಿಲಕ್ಷ$್ಯ ವಹಿಸುತ್ತಿದ್ದಾರೆ. 1 ತಿಂಗಳಲ್ಲಿ ನೋಂದಣಿ ಮಾಡಿಕೊಳ್ಳದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯೆ ಹಾಗೂ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದರು.

ಮಣಿಪಾಲ ರಜತಾದ್ರಿಯ ಅಟಲ್​ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಹೋಂ ಸ್ಟೇ, ರೆಸಾರ್ಟ್ಸ್​, ಹೌಸ್​ ಬೋಟ್​, ಪ್ರವಾಸಿ ಬೋಟ್​, ಕಯಾಕ್​ ಸಂಸ್ಥೆಗಳ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರಿ ಜಾಗ ಅಥವಾ ಸಿಆರ್​ಝಡ್​ ವ್ಯಾಪ್ತಿಯಲ್ಲಿ ಹೋಂ ಸ್ಟೇ ಕಟ್ಟಿರುವವರು ನೋಂದಣಿಗೆ ಹಿಂದೇಟು ಹಾಕುತ್ತಿರುವ ಶಂಕೆ ಇದೆ. ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗುವುದು. ನಿಯಮ ಪ್ರಕಾರ ಹೋಂ ಸ್ಟೇ ನಡೆಸಲು ಮಾಲೀಕರು ಮನೆಯಲ್ಲೇ ಇರಬೇಕು. ಬೇರೆ ಕಡೆ ವಾಸಿಸುತ್ತಿದ್ದರೆ ರೆಸಾರ್ಟ್​ ಅಥವಾ ಬ್ರೆಡ್​ ಆ್ಯಂಡ್​ ಬ್ರೇಕ್​ ಾಸ್ಟ್​ ವಿಭಾಗದಲ್ಲಿ ನೋಂದಾಯಿಸಿಕೊಳ್ಳಬೇಕು ಎಂದರು.

10 ದಿನದೊಳಗೆ ಮುಚ್ಚಳಿಕೆ ನೀಡಿ

ಪ್ರವಾಸಿಗರ ಸುರಕ್ಷತೆಗಾಗಿ ಸರ್ಕಾರದಿಂದ ತಿಳಿಸಲಾದ ಸೂಚನೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು. ಹೋಂ ಸ್ಟೇ ಮಾಲೀಕರು ರ್ನಿಜನ ಮತ್ತು ಅರಣ್ಯ ಪ್ರದೇಶಕ್ಕೆ ಪ್ರವಾಸಿಗರನ್ನು ಕರೆದುಕೊಂಡು ಹೋಗಲು ಅರಣ್ಯ ಇಲಾಖೆ ಅಥವಾ ಪೊಲೀಸ್​ ಇಲಾಖೆ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಮಾಲೀಕರು ತಮ್ಮ ಸ್ಥಳವೀಕ್ಷಣೆ ಪಟ್ಟಿಗಳ ವಿವರಗಳೊಂದಿಗೆ 10 ದಿನದೊಳಗೆ ಮುಚ್ಚಳಿಕೆ ಪತ್ರ ನೀಡಬೇಕು ಎಂದರು.

ಸಿಸಿ ಟಿವಿ ಅಳವಡಿಕೆ ಅಗತ್ಯ

ಪ್ರತಿಯೊಬ್ಬ ಗ್ರಾಹಕರ ದಾಖಲೆಗಳನ್ನು ಪಡೆಯಬೇಕು. ಎಂಟ್ರಿ ಮತ್ತು ಎಕ್ಸಿಟ್​ ಸ್ಪಷ್ಟವಾಗಿ ಕಾಣುವಂತೆ ಸಿಸಿ ಟಿವಿಗಳನ್ನು ಅಳವಡಿಸಬೇಕು. ಪ್ರವಾಸಿಗರಿಗೆ ಭದ್ರತೆ ನೀಡುವುದು ಮಾಲೀಕರ ಜವಾಬ್ದಾರಿ. ತಡರಾತ್ರಿವರೆಗೆ ಡಿಜೆ ಹಾಕಿ ಹಾಕಲು ಅವಕಾಶ ನೀಡಬಾರದು. ಹೆಣ್ಮಕ್ಕಳು ಬಂದಾಗ ವಿಶೇಷ ಕಾಳಜಿ ವಹಿಸಬೇಕು. ನಿಯಮಗಳನ್ನು ಉಲ್ಲಂಘಿಸಿದರೆ ಮಾಲೀಕರೇ ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಹೇಳಿದರು. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ಕೆ. ಅರುಣ್​, ಜಿಪಂ ಸಿಇಒ ಪ್ರತಿಕ್​ ಬಾಯಲ್​, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net