

ಯಲಬುರ್ಗಾ: ಪಟ್ಟಣದ 4ನೇ ನಾಲ್ಕನೇ ವಾರ್ಡ್‌ನ ಕೊಳಚೆ ಪ್ರದೇಶ ನಿವಾಸಿಗಳಿಗೆ ಸ್ಲಂ ಬೋರ್ಡ್‌ನಿಂದ ಮನೆ ಹಂಚಿಕೆಯಲ್ಲಿ ಹೆಚ್ಚು ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸಿಒ ಉಮೇಶ ಹಿರೇಮಠಗೆ ಸ್ಥಳೀಯರು ಶನಿವಾರ ಮನವಿ ಸಲ್ಲಿಸಿದರು.
4ನೇ ವಾರ್ಡ್‌ನಲ್ಲಿ ಸ್ಥಳೀಯ ನಿವಾಸಿಗಳಿಗೆ ವಾಸಿಸಲು ಯೋಗ್ಯವಲ್ಲದ ವಾತಾವರಣವಿದೆ. ಆರೋಗ್ಯ ಮತ್ತು ಮೂಲ ಸೌಕರ್ಯಗಳಿಂದ ನಮ್ಮ ಜನ ವಂಚಿತವಾಗಿದ್ದಾರೆ. ಅವರ ಜೀವನ ಮಟ್ಟ ಸುಧಾರಿಸಲು ಸರ್ಕಾರ ಕೊಳಚೆ ನಿವಾಸಿಗಳ ಹಕ್ಕುಗಳು ಈಗಾಗಲೇ ಅನ್ಯರ ಪಾಲಾಗುತ್ತಿರುವುದು ಕಂಡು ಬಂದಿದೆ. ಈಗ ಮಂಜೂರಾಗಿರುವ ವಸತಿ ಸೌಲಭ್ಯದಿಂದ ಮೂಲ ಸ್ಲಂ ನಿವಾಸಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಈಗಾಗಲೇ 643 ಮನೆಗಳು ಮಂಜೂರಾಗಿದ್ದು, ಅತಿ ಜನ 4ನೇ ವಾರ್ಡ್‌ನಲ್ಲಿ ಇರುವುದರಿಂದ ಹೆಚ್ಚಿನ ಆದ್ಯತೆ ನೀಡಬೇಕೆಂದು ನಿವಾಸಿಗಳಾದ ಉಮೇಶ ಭಜಂತ್ರಿ, ಶೇಖಪ್ಪ ಭಜಂತ್ರಿ, ಶರಣಪ್ಪ ಭಜಂತ್ರಿ, ಸುರೇಶ ಭಜಂತ್ರಿ, ಮಹೇಶ ಭಜಂತ್ರಿ, ಮುತ್ತಪ್ಪ ಭಜಂತ್ರಿ, ದುರುಗಪ್ಪ ಭಜಂತ್ರಿ, ಆಂಜನೇಯ ಭಜಂತ್ರಿ, ಶಾರವ್ವ ಭಜಂತ್ರಿ, ಶಂಕ್ರವ್ವ ಭಜಂತ್ರಿ, ಭರಮಪ್ಪ ಭಜಂತ್ರಿ, ಅಮರೇಶ ಭಜಂತ್ರಿ ಆಗ್ರಹಿಸಿದರು.
ಪಪಂ ಸದಸ್ಯರಾದ ಹನುಮಂತ ಭಜಂತ್ರಿ, ವಸಂತ ಭಾವಿಮನಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಬಸವರಾಜ ಪೂಜಾರ್, ಇಂಜಿನಿಯರ್ ಉಮೇಶ ಬೇಲಿ ಇನ್ನಿತರರಿದ್ದರು.