

ಪುತ್ತೂರು ಗ್ರಾಮಾಂತರ: ಆರೋಗ್ಯ ಕಾಪಾಡಿಕೊಳ್ಳುವ ವಿಚಾರದಲ್ಲಿ ನಾವು ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ ಎಂದು ಆರೋಗ್ಯ ಭಾರತಿ ರಾಷ್ಟೀಯ ಯೋಗ ಪ್ರಮುಖ್ ಡಾ.ಟಿ.ಎನ್.ಮಂಜುನಾಥ್ ಹೇಳಿದರು.
ನರಿಮೊಗರಿನ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಆಶ್ರಯದಲ್ಲಿ ಆರೋಗ್ಯ ಭಾರತಿ ಪುತ್ತೂರು ಜಿಲ್ಲೆಯ ಸಹಯೋಗದಲ್ಲಿ ಆಯೋಜಿಸಲಾದ ಮನೆಮದ್ದು ಶಿಬಿರ ಉದ್ಘಾಟಿಸಿ ಮಾಹಿತಿ ನೀಡಿದರು.
ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ರಾಘವೇಂದ್ರ, ನರಮಾನಸಿಕ ತಜ್ಞ ಡಾ.ಗಣೇಶ್ ಪ್ರಸಾದ್ ಮುದ್ರಜೆ, ಡಾ ಟಿ.ಎನ್ ಮಂಜುನಾಥ್ ನಿರ್ದೇಶನ ನೀಡಿದರು.
ಆಸ್ಪತ್ರೆಯ ಆಡಳಿತ ಮಂಡಳಿ ಸದಸ್ಯ ಎಂ.ಎಸ್.ಭಟ್ ಅತಿಥಿಗಳನ್ನು ಗೌರವಿಸಿದರು. ಗಣೇಶ್ ಭಟ್ ಮುವ್ವಾರು ವಂದಿಸಿದರು. ಎರಡನೇ ದಿನದ ಶಿಬಿರಕ್ಕೆ ಕಾಂಚನಮಾಲಾ ಸಿಂದೂರಮನೆ ಚಾಲನೆ ನೀಡಿದರು. ಶಿಬಿರಾರ್ಥಿಗಳಾದ ಸದಾಶಿವ ಭಟ್, ಅಶೋಕ್ ಭಟ್, ಮಾನಸ ಕೂಡುರಸ್ತೆ, ಡಾ.ಚೇತನಾ ಗಣೇಶ್ ಪ್ರಸಾದ್, ವೆಂಕಟೇಶ್ವರ ಭಟ್, ಪ್ರಶಾಂತಿ ನವೀನ ಕೃಷ್ಣ ಶಾಸ್ತ್ರಿ ಅನುಭವ ಹಂಚಿಕೊಂಡರು.
ಆರೋಗ್ಯ ಭಾರತಿ ವಿಭಾಗ ಸಂಯೋಜಕ ಪುರುಷೋತ್ತಮ ದೇವಸ್ಯ ಉದ್ದೇಶ ವಿವರಿಸಿದರು. ಪ್ರಸಾದಿನೀ ಆಯುರ್ವೇದ ಆಸ್ಪತ್ರೆಯ ಆಡಳಿತ ವ್ಯವಸ್ಥಾಪಕಿ ಡಾ.ಶ್ರುತಿ ಎಂ.ಎಸ್ ಕಾರ್ಯಕ್ರಮ ನಿರೂಪಿಸಿದರು.