

ಸಂಡೂರು: ಕರೊನಾ ತಡೆಯಲು ಶ್ರಮಿಸುತ್ತಿರುವುದಕ್ಕೆ ನಮಗೆ ಬೇಸರವಿಲ್ಲ. ಆದರೆ, ಹೋಮ್ ಕ್ವಾರಂಟೈನ್‌ನಲ್ಲಿ ಇರುವವರ ಅಸಹಕಾರ ತೀವ್ರ ನಿರಾಸೆ ಮೂಡಿಸುತ್ತಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಹೇಳಿದರು.
ತೋರಣಗಲ್‌ನ ಕಾಶಿ ವಿಶ್ವನಾಥ ದೇವಸ್ಥಾನದ ಆವರಣದಲ್ಲಿ ಸ್ಥಳೀಯ ಉಪ್ಪಾರ ಸಮುದಾಯ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಹಾಗೂ ಕರೊನಾ ವಾರಿಯರ್ಸ್‌ಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ನಾವು ಮತ್ತು ನಮ್ಮ ಕುಟುಂಬಗಳ ಕ್ಷೇಮಕ್ಕಾಗಿ ದುಡಿಯುತ್ತಿದ್ದೇವೆ ಎಂಬ ಪರಿವೆ ಇಲ್ಲದೆ ಕೆಲವರು ನಮ್ಮನ್ನು ಹಿಯಾಳಿಸಿದರು. ಕ್ವಾರಂಟೈನ್ ಶಿಕ್ಷೆಯಲ್ಲ. ಅದೊಂದು ಕರೊನಾ ರಕ್ಷಣಾ ಸೂತ್ರ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಸಹಕರಿಸಿದಾಗ ಕರೊನಾ ಸಂಪೂರ್ಣ ತಡೆ ಸಾಧ್ಯ ಎಂದರು.
ಸಮುದಾಯದ ಕಾರ್ಯದರ್ಶಿ ಯು.ಕೋನಪ್ಪ ಮಾತನಾಡಿದರು. ಭಗೀರಥರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಡಾ.ಹರೀಶ್, ಡಾ.ಕುಶಾಲ್ ರಾಜ್, ಡಾ.ಬಸವೇಶ್ವರ, ಡಾ.ಅರ್ಚನಾ, ಡಾ.ಫರ‌್ಹಾನಾ, ಡಾ.ಕಾವ್ಯ, ಡಾ.ದೀಪಾ ಪಾಟೀಲ್, ಬಿಎಚ್‌ಇಒ ಶಿವಪ್ಪ, ಎಎಸ್‌ಐ ರಾಮಾಂಜನಿ, ಸೈಯದ್ ಅಹ್ಮದ್, ನಾಗರಾಜ, ಆಶಾ ಕಾರ್ಯಕರ್ತೆಯರು ಸೇರಿ 20ಕ್ಕೂ ಹೆಚ್ಚು ವಾರಿಯರ್ಸ್‌ಗಳನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷ ಎನ್.ಮಲ್ಲಯ್ಯ, ಸದಸ್ಯೆ ಯು.ಲಕ್ಷ್ಮೀ ಶಿವಕುಮಾರ್, ಸಮುದಾಯದ ಅಧ್ಯಕ್ಷ ಯು.ಶಂಕ್ರಪ್ಪ, ಗ್ಯಾಂಗಿ ಶಂಕಣ್ಣ, ಯು.ಪಂಪಾಪತಿ, ಯು.ಶಿವಕುಮಾರ್, ಯು.ತಿಮ್ಮಪ್ಪ, ಯು.ವೀಣಾ ತಿಮ್ಮಣ್ಣಿ, ಯು.ಮೀನಾಕ್ಷಿ ಕುಪ್ಪಣ್ಣ ಇತರರಿದ್ದರು.