

ಉಡುಪಿ: ಹೋಮ್ ನರ್ಸ್ ಆಗಿ ಕೆಲಸಕ್ಕೆ ಸೇರಿದ್ದ ಮನೆಯಲ್ಲಿಯೇ 31.17 ಲಕ್ಷ ರೂ.ಗೂ ಅಧಿಕ ಮೌಲ್ಯದ ವಜ್ರಾಭರಣ ಹಾಗೂ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಸಿದ್ದಪ್ಪ ಕೆ.ಕೊಡ್ಲಿ ಎಂಬಾತನನ್ನು ಉಡುಪಿ ನಗರ ಪೊಲೀಸರು ಬಂಧಿಸಿ ಆತನ ಬಳಿಯಿದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬಡಗುಬೆಟ್ಟು ಗ್ರಾಮದ ಪ್ರಸಾದ್ ಎಂಬುವರು ತನ್ನ ತಂದೆಯ ಆರೈಕೆಗಾಗಿ ಉಡುಪಿಯ ಪರ್ಕಳದಲ್ಲಿರುವ ದೀಕ್ಷಾ ಹೋಮ್ ಹೆಲ್ತ್‌ಕೇರ್ ಮೂಲಕ ಸಿದ್ದಪ್ಪ ಕೆ.ಕೊಡ್ಲಿಯನ್ನು ಹೋಮ್ ನರ್ಸ್ ಆಗಿ ನೇಮಿಸಿಕೊಂಡಿದ್ದರು. ನ.17ರಂದು ಆತ ಮನೆಯ ಹಾಲ್‌ನಲ್ಲಿದ್ದ ಗಾಜಿನ ರ‌್ಯಾಕ್ ಮೇಲಿಟ್ಟಿದ್ದ 6 ಗ್ರಾಂ ತೂಕದ ವಜ್ರದ ಒಂದು ಜೊತೆ ಕಿವಿ ಓಲೆ ಹಾಗೂ ಬೆಡ್‌ರೂಂನ ಸಿಕ್ರೇಟ್ ಲಾಕರ್‌ನಲ್ಲಿದ್ದ 427 ಗ್ರಾಂ ತೂಕದ ಚಿನ್ನ, ವಜ್ರಾಭರಣ ಸಹಿತ ಒಟ್ಟು 31,17,100 ರೂ. ಮೌಲ್ಯದ ಆಭರಣಗಳನ್ನು ಕಳವು ವಾಡಿ ಪರಾರಿಯಾಗಿದ್ದನು. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.