

ಬೈಲಕುಪ್ಪೆ: ರಾಜ್ಯದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ಶುಕ್ರವಾರ ಸ್ವಾಗತ ಕೋರಿ ಸನ್ಮಾನಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಗ್ರಾಮ ಪಂಚಾಯಿತಿ ಕಚೇರಿಯ ಮುಂಭಾಗ ಸಚಿವ ಜಿ. ಪರಮೇಶ್ವರ್ ಅವರು ಕಾರಿನಲ್ಲಿ ಬಂದು ಇಳಿದಾಗ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯ ವತಿಯಿಂದ ಅಧ್ಯಕ್ಷ ರಘು, ಉಪಾಧ್ಯಕ್ಷೆ ಎಲಿಜಬೆತ್ ಅವರು ಸ್ವಾಗತಿಸಿ, ಸನ್ಮಾನಿಸಿದರು.
ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯತ್ರಿ, ತಾಲೂಕು ಪಂಚಾಯಿತಿ ಇಒ ಸುನಿಲ್‌ಕುಮಾರ್. ಗ್ರಾಮ ಪಂಚಾಯಿತಿ ಪಿಡಿಒ ಬೋರೇಗೌಡ. ಕಾರ್ಯದರ್ಶಿ ಕುಮಾರ್, ಸದಸ್ಯರಾದ ರಾಜು, ಹರೀಶ, ರಘು, ನಿಸಾರ್ ಅಹಮ್ಮದ್, ಚಂದು, ಐಶಾ. ಕುಮಾರ್, ಸಣ್ಣಜವರಯ್ಯ, ಮುತ್ತುರಾಜ್, ಕಮಲಾ, ಲಕ್ಷ್ಮೀ, ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ರಾಜಯ್ಯ, ರಾಮೇಗೌಡ, ಮಹಾದೇವ್, ಪಂಚಾಯಿತಿ ಸಿಬ್ಬಂದಿ ರಾಮಕೃಷ್ಣ, ಕೃಷ್ಣ, ಭೈರಯ್ಯ, ಮಧು ಮತ್ತಿತರರು ಇದ್ದರು.