ಬೀ ಫ್ರೆಂಡ್ಲಿ ವಿತ್ ಪೀಪಲ್ ಪೊಲೀಸರ ಕಿವಿಹಿಂಡಿದ ಗೃಹ ಸಚಿವ

Param_Friendly
Published on

ತುಮಕೂರು: ಜನ ಸ್ನೇಹಿ ಪೊಲೀಸ್ ಆಗಬೇಕು. ಠಾಣೆಗೆ ಬರುವ ಜನರ ಸಮಸ್ಯೆ ಆಲಿಸಿ, ಕೂಡಲೇ ಕಾನೂನು ರೀತಿ ಕ್ರಮ ಜರುಗಿಸಬೇಕು. ಹೀಗೆಂದು ಪೊಲೀಸರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಕಿವಿಹಿಂಡಿದರು.

ನಗರದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜನರೊಂದಿಗೆ ವಿಶ್ವಾಸದಿಂದ ಮಾತನಾಡಿ, ಸ್ನೇಹದಿಂದ ವರ್ತಿಸಿ ( ಬೀ ಫ್ರೆಂಡ್ಲಿ ವಿತ್ ಪೀಪಲ್) ಎಂದು ಸಲಹೆ ಕೊಟ್ಟರು.

ಕ್ರಿಮಿನಿಲ್ ಪ್ರಕರಣದಲ್ಲಿ ಖಡಕ್ ಆಗಿರಿ!: ಅಪರಾಧಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಖಡಕ್ ಆಗಿ ಪೊಲೀಸರು ವರ್ತಿಸಬೇಕು. ಕ್ರಿಮಿನಿಲ್‌ಗಳ ವಿರುದ್ಧ ತಡ ಮಾಡದೇ ಕಾನೂನು ಕ್ರಮಕೈಗೊಳ್ಳಬೇಕು. ನಿರಪರಾಧಿಗಳಿಗೆ ಯಾವುದೇ ಕಾರಣಕ್ಕು ಅನ್ಯಾಯ ಆಗಬಾರದು. ಹಾಗಾಗಿ, ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಪರಂ ಸೂಚನೆ ನೀಡಿದರು.

ಸಭೆಯಲ್ಲಿ ಐಜಿಪಿ ರವಿಕಾಂತೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಾಪೂರವಾಡ್, ಎಎಸ್ಪಿ ಮರಿಸ್ವಾಮಿ ಮತ್ತಿತರರು ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net