ಜೂ.21 ರಂದು ಗೃಹ ಸಚಿವರಿಗೆ ಸನ್ಮಾನ

raichur
raichur
Published on

ರಾಯಚೂರು ಜೂ.21 ರಂದು ಎನ್.ಎಸ್.ಬೋಸರಾಜ ಇವರ ಅಭಿನಂದನಾ ಕಾರ್ಯಕ್ರಮಕ್ಕೆ ಆಗಮಿಸಲಿರುವ ಗೃಹ ಸಚಿವ ಡಾ.ಪರಮೇಶ್ವರ ಅವರನ್ನು ಛಲವಾದಿ ಸಮಾಜದಿಂದ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಛಲವಾದಿ ಸಮಾಜದ ಸಂಚಾಲಕ ಜಗನ್ನಾಥ ಸುಂಕಾರಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನ ಸಭೆ ಚುನಾವಣೆ ನಂತರ ಮೊದಲ ಬಾರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ನಗರಕ್ಕೆ ಆಗಮಿಸುತ್ತಿದ್ದು ಸಮಾಜದಿಂದ ಅದ್ದೂರಿಯ ಸ್ವಾಗತ ನೀಡಿ ಸನ್ಮಾನಿಸಲಾಗುತ್ತದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಯಶಸ್ವಿಗೊಳಿಸಬೇಕೆಂದರು.

ಈ ಸಂದರ್ಭದಲ್ಲಿ ಕೆ.ಇ.ಕುಮಾರ, ಬಿ.ರಮೇಶ, ಮಲ್ಲೇಶ ಕೊಲಮಿ, ತಿಮ್ಮಾರೆಡ್ಡಿ, ವಿಶ್ವನಾಥ ಪಟ್ಟಿ, ಭೀಮಣ್ಣ ಮಂಚಾಲ, ಸತ್ಯನಾರಾಯಣ, ಆರ್.ಬಸವರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net