ಮನೆಗಳಿಗೆ ಸೀಮಿತವಾದ ಈದ್ ಉಲ್ ಫಿತ್ರ್ ಸಂಭ್ರಮ, ಬಳ್ಳಾರಿಯಲ್ಲಿ ಈದ್ಗಾ ಮೈದಾನಕ್ಕೆ ಪೊಲೀಸ್ ಬಂದೋಬಸ್ತ್

250520 Ballari Ramzan at home
Published on

ಬಳ್ಳಾರಿ: ಕರೊನಾ ವೈರಾಣು ಹರಡದಂತೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳಿಂದಾಗಿ ಈ ಬಾರಿ ರಂಜಾನ್ ಸಂಭ್ರಮ ಕಳೆಗಟ್ಟಲಿಲ್ಲ. ಮನೆಗಳಲ್ಲೇ ಪ್ರಾರ್ಥನೆ ಮಾಡಬೇಕೆಂಬ ಸೂಚನೆಯಿಂದಾಗಿ ಈದ್ಗಾ ಮೈದಾನದತ್ತ ಜನರು ಸುಳಿಯಲೇ ಇಲ್ಲ.

ಜಿಲ್ಲೆಯಲ್ಲಿ ಮುಸ್ಲಿಮರು ಮನೆಗಳಲ್ಲೇ ಈದ್ ಉಲ್ ಫಿತ್ರ್ ಪ್ರಾರ್ಥನೆ ಸಲ್ಲಿಸಿದರು. ಇದರಿಂದಾಗಿ ಸಾಮೂಹಿಕ ಪ್ರಾರ್ಥನೆ ಬಳಿಕ ಅಪ್ಪಿಕೊಂಡು ಹಬ್ಬದ ಶುಭಾಶಯ ಕೋರುವ ಸಂಪ್ರದಾಯಕ್ಕೆ ಈ ಬಾರಿ ಕಡಿವಾಣ ಬಿದ್ದಂತಾಗಿತ್ತು. ಈದ್ಗಾ ಮೈದಾನಕ್ಕೆ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಲಾಕ್‌ಡೌನ್‌ದಿಂದಾಗಿ ದುಡಿಮೆ ಇಲ್ಲದೆ ಕೆಲವರು ಹೊಸ ಬಟ್ಟೆ ಖರೀದಿಯಿಂದಲೂ ದೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net