

ಸಿಂಧನೂರು: ವಿಜಯದಾಸರ ಕೀರ್ತನೆಗಳು, ಸುಳಾದಿಗಳು ಜೀವನಾನುಭವಗಳಿಂದ ಕೂಡಿದ್ದು, ಅವುಗಳನ್ನು ಪ್ರತಿ ಮನೆಗೆ ತಲುಪಿಸುವುದು ಭಜನಾ ಮಂಡಳಿಯ ಕರ್ತವ್ಯವಾಗಿದೆ ಎಂದು ಸೌರಭ ದಾಸ ಸಾಹಿತ್ಯದ ಪ್ರಮೋದಾಚಾರ್ಯ ಪೂಜಾರ ಹೇಳಿದರು.
ನಗರದ ಪಿಡಬ್ಲುಡಿ ಕ್ಯಾಂಪ್ ಸತ್ಯಮಾರುತಿ ದೇವಸ್ಥಾನ ಹತ್ತಿರ ವಿಜಯದಾಸರ ಶಿಲಾಮೂರ್ತಿ ಪೂಜಾ ಸಮಾರಂಭದಲ್ಲಿ ಮಂಗಳವಾರ ಮಾತನಾಡಿದರು. ಮಠಾಧಿಕಾರಿ ವೆಂಕಟಗಿರಿಯಾಚಾರ್ಯ ಶಿಲಾಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿದರು.
ರಾಘವೇಂದ್ರ ದಢೇಸುಗೂರು, ಗುರುರಾಜ್ ಅಲ್ದಾಳ, ವಾದಿರಾಜ್, ರವಿ ಜುರೂಟಗಿ, ತುರ್ವಿಹಾಳ ಗುರುರಾಜ ಭಜನಾ ಮಂಡಳಿ, ಸಿಂಧನೂರಿನ ವಿಜಯ ವಿಠ್ಠಲ ಭಜನಾ ಮಂಡಳಿ, ಶ್ರೀ ರಾಮ ಭಜನಾ ಮಂಡಳಿ, ಜಗನ್ನಾಥ ಭಜನಾ ಮಂಡಳಿ, ಕಾಡ ಮಾರುತಿ ಭಜನಾ ಮಂಡಳಿ ಸದಸ್ಯರು ಇದ್ದರು.