ಜಿಲ್ಲೆಯ ಪ್ರಥಮ ಹೋಂ ಐಸೋಲೇಶನ್

covid
Published on

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ಕೋವಿಡ್ -19 ಗಂಟಲ ದ್ರವ ಪರೀಕ್ಷೆಗೆ ಮೊದಲ ಬಾರಿ ಆಂಬುಲೆನ್ಸ್ ವ್ಯವಸ್ಥೆ ಮಾಡಿದ ಕುಂದಾಪುರದಲ್ಲಿ ಮತ್ತೊಂದು ವ್ಯವಸ್ಥೆ ಸಿದ್ಧವಾಗುತ್ತಿದ್ದು ಕರೊನಾ ಲಕ್ಷಣಗಳಿಲ್ಲದ ಸೋಂಕಿತರಿಗೆ ಹೋಂ ಐಸೊಲೇಶನ್ ವ್ಯವಸ್ಥೆ ಆರಂಭವಾಗಲಿದೆ.

ಸರ್ಕಾರ ಹೋಂ ಐಸೊಲೇಶನ್ ವ್ಯವಸ್ಥೆ ಜಾರಿಗೆ ತಂದಿದ್ದು, 75 ಹಾಸಿಗೆಯ ಕೋವಿಡ್-19 ಹೋಂ ಕೇರ್ ಸೆಂಟರ್ ಐಸೊಲೇಶನ್ ಸಿದ್ಧವಾಗಿದೆ. ಬಿಸಿಎಂ ಹಾಸ್ಟೆಲ್ ಕೋವಿಡ್ ಹೋಂ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ. ಜಿಲ್ಲಾಧಿಕಾರಿ ಜಿ.ಜಗದೀಶ್ ಮಾರ್ಗದರ್ಶನದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ್ ಉಡುಪ ಪರಿಕಲ್ಪನೆಯಲ್ಲಿ 75 ಸುಸಜ್ಜಿತ ಹಾಸಿಗೆಯುಳ್ಳ ಕೇಂದ್ರ ನಿರ್ಮಾಣಗೊಂಡಿದೆ. ಸೋಂಕಿತರನ್ನು ದಾಖಲಿಸಿಕೊಳ್ಳಲು ಬೆಳಗ್ಗೆ 9ರಿಂದ ಸಾಯಂಕಾಲ 5ರವರೆಗೆ ಅಧಿಕಾರಿಗಳು ಕೇಂದ್ರದಲ್ಲಿರಲಿದ್ದಾರೆ. ಮೂವರು ವೈದ್ಯರು ಹಾಗೂ ಮೂವರು ಸಿಬ್ಬಂದಿ ಹೋಂ ಕೇರ್ ಸೆಂಟರ್ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಊಟೋಪಚಾರ, ಕುಡಿಯುವ ನೀರಿನ ವ್ಯವಸ್ಥೆ ಸರ್ಕಾರವೇ ನೋಡಿಕೊಳ್ಳಲಿದೆ. ದಾಖಲಾಗುವ ಸೋಂಕಿತರ ದೈನಂದಿನ ಆರೋಗ್ಯ ತಪಾಸಣೆ ನಿಟ್ಟಿನಲ್ಲಿ ಥರ್ಮಲ್ ಸ್ಕಾೃನರ್, ಪಲ್ಸ್ ಆಕ್ಸಿಮೀಟರ್ ಇರುತ್ತದೆ. ಈ ಕೇಂದ್ರವನ್ನು ತಮ್ಮ ಮನೆಯೆಂಬಂತೆ ನೋಡಿಕೊಂಡು ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕರೊನಾ ಲಕ್ಷಣಗಳಿಲ್ಲದೆ ಪಾಸಿಟಿವ್ ವರದಿ ಬಂದ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡುವ ಸಲುವಾಗಿ ಸರ್ಕಾರ ಹೋಂ ಐಸೊಲೇಶನ್ ವ್ಯವಸ್ಥೆ ಕಲ್ಪಿಸಿದೆ.

ಸೋಂಕಿತರ ಓಡಾಟಕ್ಕೆ ಪ್ರತ್ಯೇಕ ವ್ಯವಸ್ಥೆ: ಹೋಂ ಕೇರ್ ಸೆಂಟರ್‌ನಲ್ಲಿ ರೆಡ್ ಜೋನ್ ಮತ್ತು ಗ್ರೀನ್ ಜೋನ್ ಇದ್ದು, ನೆಲಕ್ಕೆ ಅದೇ ಬಣ್ಣದಲ್ಲಿ ಮಾರ್ಕಿಂಗ್ ಮಾಡಲಾಗಿದೆ. ಗ್ರೀನ್ ಜೋನ್‌ನಲ್ಲಿ ಅಧಿಕಾರಿ, ಸಿಬ್ಬಂದಿ ಓಡಾಡಿದರೆ, ರೆಡ್ ಜೋನ್ ಭಾಗದಲ್ಲಿ ಸೋಂಕಿತರು ಓಡಾಡಬೇಕು. ಸ್ನಾನಕ್ಕೆ ಸೋಲಾರ್ ನೀರು, ಕುಡಿಯಲು ಶುದ್ಧ ಬಿಸಿ ನೀರಿನ ಘಟಕ ಇದೆ.

ಜಿಲ್ಲೆಯ ಎಲ್ಲ ಕರೊನಾ ಸೇನಾನಿಗಳು ರಾತ್ರಿ ಹಗಲೆನ್ನದೆ ಸೇವೆ ನೀಡುತ್ತಿದ್ದಾರೆ. ಕುಂದಾಪುರ ಹಾಗೂ ಬೈಂದೂರು ತಾಲೂಕುಗಳ ಮಟ್ಟಿಗೂ ಯಾವುದೇ ಸೋಂಕಿತರು ಟೀಕೆ ಮಾಡದಂತೆ ಇಲ್ಲಿನ ಆರೋಗ್ಯ ಇಲಾಖೆ ಸೂಕ್ತ ಕ್ರಮ ವಹಿಸಿದೆ. ಕುಂದಾಪುರ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಅನ್ನು ಕೋವಿಡ್ ಹೋಂ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ. 75 ಹಾಸಿಗೆಯುಳ್ಳ ಕೇಂದ್ರ ನಿರ್ಮಾಣಗೊಂಡಿದೆ. ಜಿ.ಜಗದೀಶ್ ಜಿಲ್ಲಾಧಿಕಾರಿ ಉಡುಪಿ ಉಡುಪಿ ಡಿಸಿ ಮಾರ್ಗದರ್ಶನದಲ್ಲಿ ಕುಂದಾಪುರ ಉಪವಿಭಾಗ ಸಹಾಯಕ ಕಮಿಷನರ್ ಕೆ.ರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ, ಕೋವಿಡ್ ನೋಡಲ್ ಅಧಿಕಾರಿ ಡಾ.ಪ್ರಶಾಂತ್ ಭಟ್, ಡಾ. ಪ್ರೇಮಾನಂದ್ ಸಹಕಾರದಲ್ಲಿ ತಾಲೂಕು ಹೋಂ ಕೇರ್ ಸೆಂಟರ್ ನಿರ್ಮಿಸಲಾಗಿದೆ. ಕುಂದಾಪುರ ಹಾಗೂ ಬೈಂದೂರಿನ ರೋಟರಿ ಕ್ಲಬ್ ಹಾಸಿಗೆ ಕೊಡುಗೆ ನೀಡಿದೆ. ಕೇಂದ್ರದಲ್ಲಿ ದಾಖಲಾಗುವ ಸೋಂಕಿತರಿಗೆ ಯೋಗಾಭ್ಯಾಸ ಮಾಡಿಸುವ ಚಿಂತನೆಯೂ ಇದೆ. ಡಾ.ನಾಗಭೂಷಣ್ ಉಡುಪ ತಾಲೂಕು ವೈದ್ಯಾಧಿಕಾರಿ ಕೆಎನ್‌ಡಿ_25 ಜೆಯುಎಲ್‌_3 ಕೋವಿಡ್ ಹೋಂ ಕೇರ್ ಸೆಂಟರ್ ಆಗಿ ಪರಿವರ್ತಿಸಲಾದ ಬಿಸಿಎಂ ಹಾಸ್ಟೆಲ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net