ತವರಿನ ಸತ್ಕಾರ ಸ್ವರ್ಗಕ್ಕಿಂತ ಮಿಗಿಲು

1Huk3-Web
ಹುಕ್ಕೇರಿ ಪಟ್ಟಣದ ಅಡವಿಸಿದ್ದೇಶ್ವರ ವಿಶ್ವಸ್ಥ ಮಂಡಳಿ ಅಧ್ಯಕ್ಷ ಜಯಗೌಡ ಪಾಟೀಲ ಅವರು ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ ಅವರನ್ನು ಸತ್ಕರಿಸಿದರು. ಮಂಡಳಿ ಉಪಾಧ್ಯಕ್ಷ ಮಲ್ಲಪ್ಪ ಬಿಸಿರೊಟ್ಟಿ, ಕಾರ್ಯದರ್ಶಿ ನಿಂಗೌಡ ಪಾಟೀಲ, ಖಜಾಂಚಿ ಸಂಜೀವಕುಮಾರ ಖೋತ, ಸದಸ್ಯರಾದ ಸುನೀಲ ನಾಯಿಕ ಇತರರು ಇದ್ದರು.
Published on

ಹುಕ್ಕೇರಿ: ತವರಿನ ಸತ್ಕಾರ ಸ್ವರ್ಗಕ್ಕಿಂತ ಮಿಗಿಲು. ಆ ನಿಟ್ಟಿನಲ್ಲಿ ನಾನು ಆಡಿ ಬೆಳೆದ ಓಣಿಯ ಹಿರಿಯರು, ಆತ್ಮೀಯರು ಗೌರವಿಸಿದ್ದು ಸಂತಸ ಹಾಗೂ ಜವಾಬ್ದಾರಿ ಹೆಚ್ಚಿಸಿದೆ ಎಂದು ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ ಹೇಳಿದ್ದಾರೆ.

ಸ್ಥಳೀಯ ಅಡವಿಸಿದ್ದೇಶ್ವರ ಮಠದಲ್ಲಿ ಶನಿವಾರ ಅಡವಿಸಿದ್ದೇಶ್ವರ ವಿಶ್ವಸ್ಥ ಮಂಡಳಿ ವತಿಯಿಂದ ನಡೆದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಾಗಲೇ ಶಾಸಕ ಉಮೇಶ ಕತ್ತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರು ಕೆಲವೊಂದು ಯೋಜನೆಗಳನ್ನು ಚರ್ಚಿಸಿದ್ದು, ಮುಂಬರುವ ದಿನಗಳಲ್ಲಿ ಅವುಗಳ ಸಾಕಾರಕ್ಕೆ ಪುರಸಭೆ ಅಧಿಕಾರಿಗಳು ಮತ್ತು ಸದಸ್ಯರೊಂದಿಗೆ ದುಡಿಯುವುದಾಗಿ ತಿಳಿಸಿದರು. ನಿರಂತರ ಕುಡಿಯುವ ನೀರು ಸರಬರಾಜು ಯೋಜನೆ ಯಶಸ್ವಿಯಾಗಿ ಜಾರಿಗೆ ತಂದ ಶ್ರೇಯಸ್ಸು ನಮ್ಮ ಶಾಸಕರದ್ದಾಗಿದೆ. ಜತೆಗೆ ಒಳಚರಂಡಿ, ರಸ್ತೆ ಮೊದಲಾದ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡುವುದಾಗಿ ತಿಳಿಸಿದರು. ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನೂತನ ನಿರ್ದೇಶಕ ಜಯಗೌಡ ಪಾಟೀಲ ಮಾತನಾಡಿ, ದೇಶದಲ್ಲಿಯೇ ಸಹಕಾರಿ ತತ್ತ್ವದಡಿ ವಿದ್ಯುತ್ ಸರಬರಾಜು ನೀಡುವ ಏಕೈಕ ಸಂಸ್ಥೆ ದಿ.ಅಪ್ಪಣ್ಣಗೌಡರಿಂದ ಸ್ಥಾಪಿತವಾಗಿದೆ. ಕತ್ತಿ ಸಹೋದರರ ಪ್ರಯತ್ನ ಮತ್ತು ನಿಸ್ವಾರ್ಥ ಸೇವೆಯಿಂದ ಸಂಸ್ಥೆ ಉಳಿದಿದೆ ಎಂದರು. ಪುರಸಭೆ ಉಪಾಧ್ಯಕ್ಷ ಆನಂದ ಗಂಧ, ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಜಯಗೌಡ ಪಾಟೀಲ ಅವರನ್ನು ವಿಶ್ವಸ್ಥ ಮಂಡಳಿಯಿಂದ ಸತ್ಕರಿಸಿದರು. ವಿಶ್ವಸ್ಥ ಮಂಡಳಿ ಉಪಾಧ್ಯಕ್ಷ ಮಲ್ಲಪ್ಪ ಬಿಸಿರೊಟ್ಟಿ, ಕಾರ್ಯದರ್ಶಿ ನಿಂಗೌಡ ಪಾಟೀಲ, ಖಜಾಂಚಿ ಸಂಜೀವಕುಮಾರ ಖೋತ, ಸದಸ್ಯರಾದ ಸುನೀಲ ನಾಯಿಕ, ಶಂಕರ ಹುಲ್ಲೋಳಿ, ರಾಯಗೌಡ ಪಾಟೀಲ, ಬಸವರಾಜ ಕುಂಬಾರ, ರಮೇಶ ತೇರಣಿ, ಶ್ರೀಶೈಲ ಸಂಬಾಳ, ಉದಯಕುಮಾರ ಮುದಕಣ್ಣವರ ಮತ್ತಿತರರಿದ್ದರು. ರಾಮಗೌಡ ಪಾಟೀಲ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net