ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ

2
Published on

ಕೊಕಟನೂರ: ಅಥಣಿ ತಾಲೂಕಿನಲ್ಲಿ ಹನ್ನೆರಡು ಜನರಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೋಂಕಿತರು ಮತ್ತೆ ಯಾರೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿಯನ್ನು ತಾಲೂಕಾಡಳಿತ ಕಲೆ ಹಾಕುತ್ತಿದೆ.

ಕರೊನಾ ಸೋಂಕಿತರು ಕಂಡುಬಂದ ತಾಲೂಕಿನ ನಂದಗಾಂವ, ಝುಂಜರವಾಡ, ಸವದಿ ಹಾಗೂ ಖವಟಕೊಪ್ಪ ಗ್ರಾಮಗಳಲ್ಲಿ ಆರೋಗ್ಯ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ-ಮನೆಗೆ ತೆರಳಿ ಮಾಹಿತಿ ಪಡೆಯುತ್ತಿದ್ದಾರೆ.

ಜನರ ಆರೋಗ್ಯದ ಏರು ಪೇರು ಕುರಿತು ನಿಗಾ ವಹಿಸಿದ್ದಾರೆ. ಆದರೆ, ಮಾಹಿತಿ ನೀಡಿದರೆ ನಮ್ಮನ್ನೂ ಕ್ವಾರಂಟೈನ್ ಮಾಡುತ್ತಾರೆ ಎಂಬ ಭಯದಿಂದ ಕೆಲವರು ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ‘ಅಧಿಕಾರಿಗಳು ಮೊದಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೆ ಈ ಪರಿಸ್ಥಿತಿ ನಮಗೆ ಬರುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net