ಗೃಹ ಆರೋಗ್ಯ ಕಾರ್ಯಕ್ರಮದಡಿ 14.24 ಲಕ್ಷ ಜನರ ತಪಾಸಣೆ

Home health
Published on

ಕಾರವಾರ: ರಾಜ್ಯ ಸರ್ಕಾರ ಗೃಹ ಆರೋಗ್ಯ ಯೋಜನೆಯನ್ನು ಜಿಲ್ಲೆಯಲ್ಲೂ ಜಾರಿಗೆ ತರಲು ಮುಂದಾಗಿದ್ದು, ಜಿಲ್ಲೆಯ 14.24 ಲಕ್ಷ ಜನರನ್ನು ಪರೀಕ್ಷೆ ಮಾಡಲು ಯೋಜಿಸಲಾಗಿದೆ.

ಕೋಲಾರ ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಈ ಇಡೀ ರಾಜ್ಯದಾದ್ಯಂತ ವಿಸ್ತರಿಸಲಾಗುತ್ತಿದೆ. ಮಧುಮೇಹ, ಅಽಕ ರಕ್ತದೊತ್ತಡ, ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್, ಅಸ್ತಮಾ ಹಾಗೂ ಅಬ್ಸ್ಸ್ಟçಕ್ಟಿವ್ ಸ್ಲಿಪ್ ಅಪ್ನಿಯಾ(ಒಎಸ್‌ಒ) ಅಥವಾ ಮಾನಸಿಕ ಕಾಯಿಲೆ ಮುಂತಾದ ಸಾಂಕ್ರಾಮಿಕವಲ್ಲದ ಒಟ್ಟು 14 ಕಾಯಿಲೆಗಳನ್ನು ಆರೋಗ್ಯ ಕಾರ್ಯಕರ್ತರು ಮನೆ, ಮನೆಗೆ ತೆರಳಿ ಪರೀಕ್ಷೆ ಮಾಡಿ ಗುರುತಿಸುತ್ತಾರೆ.

ಒಂದು ಅಂದಾಜಿನ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 26.9 ರಷ್ಟು ಜನ ಅಽಕ ರಕ್ತದೊತ್ತಡ, ಶೇ.15.6 ರಷ್ಟು ಜನ ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಹಾಗಾಗಿ ರೋಗಗಳನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಿ ಅದಕ್ಕೆ ಚಿಕಿತ್ಸೆ ನೀಡುವುದು ಇದರ ಉದ್ದೇಶವಾಗಿದೆ. ಆರೋಗ್ಯ ಕಾರ್ಯಕರ್ತೆಯರು ಮನೆಯ 30 ವರ್ಷ ಮೇಲ್ಪಟ್ಟ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸುವರು. ನಂತರ ಸಂಬಂಧಪಟ್ಟ ಕಾಯಿಲೆಗೆ ಉಚಿತ ಔಷಧ ಕೊಡಲು ವ್ಯವಸ್ಥೆ ಮಾಡಲಿದ್ದಾರೆ.

ಈಗಾಗಲೇ ಆಶಾ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಅವರು, ಮನೆ, ಪ್ರತಿ ಆಶಾ ಕಾರ್ಯಕರ್ತೆಗೆ 3 ರಿಂದ 5 ಹಳ್ಳಿ ಬರಲಿದ್ದು, 100 ರಿಂದ 200 ಜನಸಂಖ್ಯೆಯನ್ನು ಅವರು ಕವರ್ ಮಾಡಲಿದ್ದಾರೆ. ಕೋವಿಡ್ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ಗಂಭೀರ ಕಾಯಿಲೆ ಇರುವವರನ್ನು ಗುರುತಿಸಿದ್ದರು.

ತಾಲೂಕು ಅಂದಾಜು ಅರ್ಹ ಜನಸಂಖ್ಯೆ

  • ಕಾರವಾರ 1.55 ಲಕ್ಷ
  • ಅಂಕೋಲಾ 90 ಸಾವಿರ
  • ಕುಮಟಾ 1.43 ಲಕ್ಷ
  • ಹೊನ್ನಾವರ 1.67 ಲಕ್ಷ
  • ಭಟ್ಕಳ 1.69 ಲಕ್ಷ
  • ಶಿರಸಿ 1.76 ಲಕ್ಷ
  • ಸಿದ್ದಾಪುರ 1.13 ಲಕ್ಷ
  • ಯಲ್ಲಾಪುರ 74 ಸಾವಿರ
  • ಮುಂಡಗೋಡ 1.14 ಲಕ್ಷ
  • ಹಳಿಯಾಳ 1.73 ಲಕ್ಷ
  • ಜೊಯಿಡಾ 44ಸಾವಿರ

ರಾಜ್ಯದಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಹೆಚ್ಚುತ್ತಿರುವ ಆತಂಕವಿದೆ. ಇದರಿಂದ ಗೃಹ ಆರೋಗ್ಯ ಕಾರ್ಯಕ್ರಮ ಜಾರಿಗೆ ತರಲಾಗುತ್ತಿದೆ. ಆರೋಗ್ಯ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯಿಂದ ಈ ಕಾರ್ಯಕ್ರಮ ನಿರ್ವಹಿಸಬೇಕು. ಮತ್ತು ನಿಜವಾಗಿ ತೊಂದರೆಗೊಳಗಾದವರಿಗೆ ನಿರಂತರವಾಗಿ ಔಷಧ ವಿತರಿಸುವ ವ್ಯವಸ್ಥೆ ಮಾಡಬೇಕು.

ದಿನೇಶ ಗುಂಡೂರಾವ್ ಆರೋಗ್ಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net