ಗೃಹರಕ್ಷಕದಳ ಉಪ್ಪಿನಂಗಡಿಗೆ ಪ್ರಭಾರ ಘಟಕಾಧಿಕಾರಿ ನೇಮಕ

mng--10 sep Homeguard
Published on

ಮಂಗಳೂರು: ಗೃಹರಕ್ಷಕದಳ ಉಪ್ಪಿನಂಗಡಿ ಘಟಕಕ್ಕೆ ಪ್ರಭಾರ ಘಟಕಾಧಿಕಾರಿಯಾಗಿ ಅಸಿಸ್ಟೆಂಟ್ ಸೆಕ್ಷನ್ ಲೀಡರ್ ಅಣ್ಣು ಬಿ.ಅವರನ್ನು ನೇಮಕ ಮಾಡಿ ಮಂಗಳವಾರ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ಪ್ರಮಾಣಪತ್ರ ಹಸ್ತಾಂತರಿಸಿದರು.


ಉಪ್ಪಿನಂಗಡಿ ಪ್ರಭಾರ ಘಟಕಾಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದ ದಿನೇಶ್ ಬಿ. ಇವರು ವೈಯಕ್ತಿಕ ಕಾರಣದಿಂದಾಗಿ ಪ್ರಭಾರ ಘಟಕಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿರುವುದರಿಂದ ಅವರನ್ನು ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿಯನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ನೇಮಿಸಿ ಜಿಲ್ಲಾ ಕಛೇರಿಯಿಂದ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕದಳದ ಕಛೇರಿ ಅಧೀಕ್ಷಕ ಚಂದ್ರು, ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ಎ., ಮಂಜುಳಾ ಮತ್ತು ಉಪ್ಪಿನಂಗಡಿ ಘಟಕದ ಸಾಜೆರ್ಂಟ್ ರಾಮಣ್ಣ ಆಚಾರ್, ಗೃಹರಕ್ಷಕಿಯರಾದ ಸುಲೋಚನಾ, ನಿಶಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net