ಉದ್ಯಮಿ ಜಯಂತ್ ಶೆಟ್ಟಿ ಇನ್ನಿಲ್ಲ

mng--27 june Jayanth shetty
Published on

ಸುಳ್ಯ: ನಗರದ ಕೇರ್ಪಳ ನಿವಾಸಿ, ಉದ್ಯಮಿ, ಗೃಹರಕ್ಷಕದಳದ ಘಟಕಾಧಿಕಾರಿ ಜಯಂತ್ ಶೆಟ್ಟಿ (60) ಮಂಗಳವಾರ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ತಾಯಿ, ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


ತುಂಬಲಾರದ ನಷ್ಟ: ಜಯಂತ್ ಶೆಟ್ಟಿ ಅವರು ಗೃಹರಕ್ಷಕದಳದ ಸುಳ್ಯದ ಘಟಕಾಧಿಕಾರಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದರು. ಅವರ ಅಗಲಿಕೆ ಇಲಾಖೆಗೆ ತುಂಬಲಾರದ ನಷ್ಟ ಎಂದು ಗೃಹರಕ್ಷಕದಳದ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net