

ಕಾರವಾರ:ಅಂಕೋಲಾದ ದಂತವೈದ್ಯ ಡಾ.ಸಂಜು ನಾಯಕ ಅವರನ್ನು ಗೃಹ ರಕ್ಷಕ ದಳದ ಗೌರವ ಸಮಾಧೇಷ್ಠ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.
ರಾಜ್ಯ ಗೃಹ ರಕ್ಷಕ ದಳದ ಮಹಾ ಸಮಾದೇಷ್ಠರು ಹಾಗೂ ಪೌರ ರಕ್ಷಣಾ ಇಲಾಖೆಯ ಆರಕ್ಷಕ ಮಹಾ ನಿರ್ದೇಶಕರು ಈ ಸಂಬಂಧ ಆದೇಶ ಹೊರಡಿಸಿದ್ದು, ಬೇರೆಯವರ ನೇಮಕವಾಗುವವರೆಗೆ ಎಎಸ್‌ಪಿ ಅವರು ಹುದ್ದೆಯ ಪ್ರಭಾರ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
ಕರ್ನಾಟಕ ಗೃಹ ರಕ್ಷಕ ನಿಯಮಗಳು 1963 ರ ಉಪ ನಿಯಮ 3ಸಿ(5) ನ್ನು ಉಲ್ಲಂಘಿಸಿ, ಗೌರವ ಸಮಾಧೇಷ್ಠ ಹುದ್ದೆಯ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದರಿಂದ ಸರ್ಕಾರದ ಆದೇಶದ ಅನ್ವಯ ಈ ಕ್ರಮ ವಹಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 2024 ರಲ್ಲಿ ಅವರ ನೇಮಕವಾಗಿತ್ತು.