ಗೃಹರಕ್ಷಕ ದಳದ ಕಚೇರಿ ಉದ್ಘಾಟನೆ

home gaurd
Published on

ಕುಶಾಲನಗರ:

ಕೊಡಗು ಜಿಲ್ಲೆ ಗೃಹರಕ್ಷಕ ದಳ ಕುಶಾಲನಗರ ಘಟಕದ ಕಚೇರಿಯನ್ನು ಶುಕ್ರವಾರ ಕೊಡಗು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಾರಿಕೆ ಪಿ. ದಿನೇಶ್ ಕುಮಾರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಕೊಡಗಿನಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಬಹಳ ಶಿಸ್ತು ಸಂಯಮದಿAದ ಕರ್ತವ್ಯ ನಿರ್ವಹಿಸುತ್ತಿರುವುದು ಸಂತೋಷದ ವಿಷಯ. ಬಹಳ ವರ್ಷಗಳಿಂದ ಗೃಹರಕ್ಷಕ ದಳದ ಸಿಬ್ಬಂದಿಗೆ ಕಚೇರಿ ಅವಶ್ಯಕತೆ ಇದ್ದು ಈಗ ಪೋಲಿಸ್ ಠಾಣೆಯ ಸಮೀಪದಲ್ಲಿರುವ ಇಲಾಖೆಯ ಕಟ್ಟಡದಲ್ಲೇ ಕಚೇರಿ ತೆರೆದಿರುವುದು ಅನುಕೂಲಕರವಾಗಿದೆ ಎಂದರು.

ಪೊಲೀಸ್ ಉಪ ಅಧೀಕ್ಷಕ ಚಂದ್ರಶೇಖರ್, ವೃತ್ತ ನಿರೀಕ್ಷಕ ಬಿ.ಎಸ್. ದಿನೇಶ್ ಕುಮಾರ್, ಉಪ ನಿರೀಕ್ಷಕ ಗಣೇಶ್, ಗ್ರಾಮಾಂತರ ಪೋಲಿಸ್ ಠಾಣೆ ಉಪ ನಿರೀಕ್ಷಕ ಎನ್. ರಾಮಚಂದ್ರ, ಕೊಡಗು ಗೃಹರಕ್ಷಕ ದಳ ಸಹಾಯಕ ಭೋದಕ ಡಿ. ಅಕ್ಷಯ್ ಕುಮಾರ್, ಪೋಲಿಸ್ ಸಿಬ್ಬಂದಿ, ಗೃಹರಕ್ಷಕ ದಳದ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net