ಮನೆಗೆ ಬೆಂಕಿ ಬಿದ್ದು 2.50 ಲಕ್ಷ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲು

2-RNR-05
Published on

ರಾಣೆಬೆನ್ನೂರ: ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯಲ್ಲಿಟ್ಟ 2.50 ಲಕ್ಷ ರೂ. ಮೌಲ್ಯದ ಬೈಕ್ ಹಾಗೂ ಇತರ ವಸ್ತುಗಳು ಸುಟ್ಟು ಕರಕಲಾದ ಘಟನೆ ಇಲ್ಲಿಯ ಅಶೋಕ ನಗರದಲ್ಲಿ ಮಂಗಳವಾರ ನಡೆದಿದೆ.
ದಾದಾಪೀರ್ ಬಾಬಾಜಾನ ಶಿಡೇನೂರ (44) ಎಂಬುವರ ಮನೆ ಸುಟ್ಟಿರುವುದು.
ಇವರು ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇದರಿಂದ ಮನೆಯಲ್ಲಿಟ್ಟಿದ್ದ 2.50 ಲಕ್ಷ ರೂ. ಮೌಲ್ಯದ ಮೂರು ಬೈಕ್, ಎಲ್‌ಇಡಿ ಟಿವಿ ಹಾಗೂ ಇತರ ವಸ್ತುಗಳು ಸುಟ್ಟು ಕರಕಲಾಗಿವೆ ಎನ್ನಲಾಗಿದೆ.
ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net