ಮನೆ ಪರಿಸರ ಸ್ವಚ್ಛತೆಗೆ ಆದ್ಯತೆ : ಆರೋಗ್ಯಾಧಿಕಾರಿ ಯಶೋಧರ್ ಹೇಳಿಕೆ ; ಸಾಣೂರು ಗ್ರಾಮಸಭೆ

grama sabhe
ಸಾಣೂರು ಗ್ರಾಪಂನ ಪ್ರಥಮ ಹಂತದ ಗ್ರಾಮಸಭೆ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು
Published on

ಕಾರ್ಕಳ: ಸಾಣೂರು ಗ್ರಾಪಂ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಸಾಣೂರು ಸುವರ್ಣ ಗ್ರಾಮೋದಯ ಸೌಧ ಸಭಾಂಗಣದಲ್ಲಿ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿತು.

ಇರ್ವತ್ತೂರು ಪ್ರಾಥಮಿಕ ಕೇಂದ್ರ ಆರೋಗ್ಯಾಧಿಕಾರಿ ಯಶೋಧರ್ ಮಾತನಾಡಿ, ಮಳೆಗಾಲದಲ್ಲಿ ಡೆಂೆ, ಮಲೇರಿಯಾ ಹೆಚ್ಚಾಗಿ ಕಾಣಿಸುಕೊಳ್ಳುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಹೆಚ್ಚಿನ ಜಾಗ್ರತೆ ವಹಿಸಿಕೊಳ್ಳಬೇಕು. ಅಂಗಡಿ, ಮನೆ ಸುತ್ತಮುತ್ತ ಪರಿಸರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದರ ಜತೆಗೆ ಸೊಳ್ಳೆ ಪರದೆ ಬಳಸುವುದು ಸೂಕ್ತ. ಕೊಳಚೆ ನೀರು ನಿಲ್ಲದಂತೆ ಎಚ್ಚರ ವಹಿಸಿದಲ್ಲಿ ನೀವು ನಿಮ್ಮವರು ಸುರಕ್ಷಿತ, ನೀವು ಸುರಕ್ಷಿತರಾದರೆ ಗ್ರಾಮವೇ ಸುರಕ್ಷಿತವಾಗಿರುತ್ತದೆ. ಡೆಂೆ ಭಾದಿತರಿಗೆ ಚಿಕಿತ್ಸೆ ನೀಡಲು ಬೇಕಾದ ಎಲ್ಲ ಸೌಕರ್ಯ ಇವೆ. ಪ್ರಾಥಮಿಕ ವೈದ್ಯಕೀಯ ಕೇಂದ್ರಗಳಲ್ಲಿ ಜ್ವರ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದೆ ಎಂದರು.


ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ ರಾವ್ ನೋಡಲ್ ಅಧಿಕಾರಿಯಾಗಿದ್ದರು. ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆಯಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು. ಉಪಾಧ್ಯಕ್ಷೆ ಯಶೋದಾ ವಿ.ಶೆಟ್ಟಿ, ಸದಸ್ಯರಾದ ಪ್ರಸಾದ್ ಪೂಜಾರಿ, ಪ್ರಕಾಶ್ ರಾವ್, ಮಂಜುನಾಥ್ ಶೆಟ್ಟಿ, ಸುಭಾಸ್ ಪೂಜಾರಿ, ರಜನಿ, ಗಿರಿಜಾ, ಪ್ರಮೀಳಾ, ಸರಸ್ವತಿ, ರಮೇಶ್, ವಸಂತ, ಸುಜಾತಾ ಶೆಟ್ಟಿ, ಅಮಿತಾ ಪಿ.ಶೆಟ್ಟಿ ಉಪಸ್ಥಿತರಿದ್ದರು. ಸವಿತಾ ನಿರೂಪಿಸಿದರು. ಪಿಡಿಒ ಮಧು ಎಂ.ಸಿ. ವಂದಿಸಿದರು.

ವಿದ್ಯಾರ್ಥಿಗಳಿಗೆ ಅಭಿನಂದನೆ

ಸಾಣೂರು ಗ್ರಾಮದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಯರು, ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಾಣೂರು ಯುವಕ ಮಂಡಲ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಣೂರು ಶೌರ್ಯ ವಿಪತ್ತು ನಿರ್ವಹಣಾ ಘಟಕ ಮತ್ತು ಶಕ್ತಿ ಸಮೃದ್ಧಿನಿ ಒಕ್ಕೂಟ ಸಾಣೂರು ಅವರನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net