

ಚಿತ್ರದುರ್ಗ: ನಗರಸಭೆಯಿಂದ ಕವಾಡಿಗರಹಟ್ಟಿ ಆಶ್ರಯ ಬಡಾವಣೆಯಲ್ಲಿ ವಸತಿ ಹಕ್ಕು ಪತ್ರ ಪಡೆದಿರುವ ನಮಗೆ ಮನೆಗಳು ಸಿಗುತ್ತಿಲ್ಲ ಎಂದು ಆರೋಪಿಸಿ ಸೋಮವಾರ ನಗರದಲ್ಲಿ ಫಲಾನುಭವಿಗಳು ಪ್ರತಿಭಟನೆ ನಡೆಸಿದರು.
ಹಕ್ಕುಪತ್ರಗಳನ್ನು ಪಡೆದವರಿಗೆ ಮನೆಗಳು ಲಭ್ಯವಿಲ್ಲದಂತಾಗಿದೆ. ಇಲ್ಲಿ ಅನ್ಯರು ವಾಸವಿದ್ದಾರೆ. ಇದರಿಂದಾಗಿ ಅರ್ಹರಿಗೆ ಹಕ್ಕುಪತ್ರ ಮಾತ್ರವೇ ಗತಿ ಎನ್ನುವಂತಾಗಿದೆ. ಈ ಕುರಿತಂತೆ ಆಶ್ರಯ ಸಮಿತಿ ಅಧ್ಯಕ್ಷ ಜಿ.ಎಚ್.ತಿಪ್ಪಾರೆಡ್ಡಿ ಅವರು ಕೋರ್ಟ್‌ನಲ್ಲಿ ಕೇಸು ಹಾಕಿ ಎನ್ನುತ್ತಾರೆ. ನಗರಸಭೆ ಆಯುಕ್ತರು, ಕೆಲ ದಿನಗಳ ಕಾಲ ಕಾಯುವಂತೆ ಹೇಳುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಮಿಕ ಮುಖಂಡ ವೈ.ಕುಮಾರ್, ಪ್ರೇಮಾ, ಮುನಿರಾಜು, ರಾಜೇಶ್, ರಾಬರ್ಟ್, ಎಸ್.ತಿಪ್ಪೇಸ್ವಾಮಿ, ಅಶೋಕ್ ನಾಯ್ಡು, ರಾಬರ್ಟ್, ಮಂಜುನಾಥ್, ಚಂದ್ರು, ಜಯಸುಧಾ, ಪವಿತ್ರಾ ಮತ್ತಿತರರು ಇದ್ದರು.