ಮನೆಗೆ ಬಾರದ ಪತ್ನಿ, ಪತಿ ನೇಣಿಗೆ ಶರಣು

Hanging
Published on

ಕೊಕಟನೂರ: ತವರು ಮನೆಗೆ ಹೋದ ಪತ್ನಿ ಮರಳಿ ಬರಲು ನಿರಾಕರಿಸಿದ್ದರಿಂದ ಮನನೊಂದ ಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ. ಗ್ರಾಮದ ವೆಂಕಣ್ಣ ರಾಮಪ್ಪ ಪಾಟೀಲ (24) ಆತ್ಮಹತ್ಯೆ ಮಾಡಿ ಕೊಂಡ ವ್ಯಕ್ತಿ. ಮೃತ ವೆಂಕಣ್ಣ ಒಂದೂವರೆ ವರ್ಷದ ಹಿಂದೆ ಅದೇ ಗ್ರಾಮದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದನು.

ಅನಾರೋಗ್ಯದ ಕಾರಣದಿಂದ ಪತ್ನಿ ತವರು ಮನೆಗೆ ತೆರಳಿದ್ದಳು. ಶನಿವಾರ ಆಕೆಯ ಬಳಿ ಮಾತನಾಡಿ, ಮನೆಗೆ ಬಾ ಎಂದು ಕರೆದಾಗ ಬರಲು ನಿರಾಕರಿಸಿದ್ದರಿಂದ ಮನನೊಂದು ಮಾವನ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net