ಹೊಂಬಳ ಭವನ ಉದ್ಘಾಟನೆ ಸೆ. 7ರಂದು

h6-S Nanjunda Prasad
Published on

ಹುಬ್ಬಳ್ಳಿ: ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘ ಹಾಗೂ ಧಾರವಾಡ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಸಹಯೋಗದಲ್ಲಿ ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಕೊಪ್ಪಿಕರ್ ರಸ್ತೆಯಲ್ಲಿರುವ ಹೊಂಬಳ ಭವನದ ಉದ್ಘಾಟನಾ ಸಮಾರಂಭನ್ನು ಸೆ. 7ರಂದು ಬೆಳಗ್ಗೆ 10ರಂದು ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್. ನಂಜುಂಡಪ್ರಸಾದ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಸಾವಿರ ಮಠದ ಶ್ರೀಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಮಹೇಶ ಟೆಂಗಿನಕಾಯಿ, ಪಾವಗಡ ಶಾಸಕ ಎಚ್.ವಿ. ವೆಂಕಟೇಶ, ಸಂಘದ ರಾಷ್ಟ್ರೀಯ ಅಧ್ಯಕ್ಷ ಸಿ.ಎ. ಎಸ್. ವೆಂಕಟರಮಣಿ, ವಾಣಿಜ್ಯ ತೆರಿಗೆ ಆಯುಕ್ತ ಎಸ್. ಮಿರ್ಜಾ ಅಜಮತ್‌ವುಲ್ಲಾ, ಬಿ.ಟಿ. ಮನೋಹರ, ಡಾ.ಬಿ.ವಿ. ಮುರಳಿಕೃಷ್ಣ ಭಾಗವಹಿಸುವರು ಎಂದರು.

ಸಂಘವು ಇತ್ತೀಚೆಗೆ 50ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ತೆರಿಗೆ ಸಲಹೆಗಾರರ ಸಂಘದ ಸದಸ್ಯರ ಅನುಕೂಲಕ್ಕಾಗಿ ಕೆಎಸ್‌ಟಿಪಿಎ ಹೊಂಬಳ ಭವನ ಸ್ಥಾಪಿಸಲಾಗಿದೆ ಎಂದರು.

ಪ್ರಮುಖರಾದ ಮುಕುಂದ ಪೋತ್ನಿಸ್, ರವೀಂದ್ರ ಶೆಟ್ಟಿ, ಸೋಮು ಸೋಲಾರಗೊಪ್ಪ, ರುದ್ರಪ್ಪ ವಿರಪಣ್ಣವರ, ಡಿ.ಎಂ. ಭತ್ತದ, ಆರ್.ವಿ. ಹುಬಳೀಕರ, ರವೀಂದ್ರ ದೇಸಾಯಿ, ಮಹಾಂತೇಶ ದಾಡಿಗೊಂಡಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net