ರಘುಪತಿ ದೇವಾಲಯದಲ್ಲಿ ಹೋಮ, ಹವನ

17
ಹೊಳೆನರಸೀಪುರ ಪಟ್ಟಣದ ಕೋಟೆ ಮುಖ್ಯರಸ್ತೆಯ ರಘುಪತಿ ದೇವಾಲಯದಲ್ಲಿ ರಾಮನವಮಿ ಅಂಗವಾಗಿ ವಿಶೇಷ ಪೂಜೆ ನಡೆಸಲಾಯಿತು. ಎಚ್.ಡಿ. ರೇವಣ್ಣ ಭಾಗವಹಿಸಿದ್ದರು.
Published on

ಹೊಳೆನರಸೀಪುರ: ಕೋಟೆ ಮುಖ್ಯರಸ್ತೆಯಲ್ಲಿ ಇತ್ತೀಗಷ್ಟೇ ಜೀರ್ಣೋದ್ಧಾರ ಗೊಂಡಿದ್ದ ರಘುಪತಿ ದೇವಾಲಯದಲ್ಲಿ ರಾಮನವಮಿ ಅಂಗವಾಗಿ ಬುಧವಾರ ಹೋಮ, ಹವನ, ವಿಶೇಷ ಪೂಜೆಗಳು ನಡೆದವು.

ಅರ್ಚಕರ ತಂಡ ರಘುಪತಿ ರಾಮನನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ ಪೂಜಿಸಿ ಸಾರ್ವಜನಿಕರಿಗೆ ತೀರ್ಥ ಪ್ರಸಾದ ನೀಡಿದರು. ಶಾಸಕ ಎಚ್.ಡಿ. ರೇವಣ್ಣ, ಪಿ.ಎಚ್.ವೆಂಕಟೇಶ್, ಟಿ.ಶಿವಕುಮಾರ್ ಸೇರಿದಂತೆ ನಗರ ಗಣ್ಯರು, ಮಹಿಳೆಯರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೋಸಂಬರಿ, ಮಜ್ಜಿಗೆ ವಿತರಣೆ: ಶ್ರೀರಾಮನವಮಿ ಅಂಗವಾಗಿ ಬುಧವಾರ ಇಲ್ಲಿನ ಸುಭಾಶ್ ವೃತ್ತದಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಿದ ಹಿಂದು ಬಾಂಧವರ ತಂಡದ ಸದಸ್ಯರು ಸಾರ್ವಜನಿಕರಿಗೆ ಕೋಸಂಬರಿ, ಮಜ್ಜಿಗೆ ವಿತರಿಸಿದರು. ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಸ್. ಸುದರ್ಶನ್, ರೋಹಿತ್, ಗುರು, ಲಾರಿ ಕುಮಾರ್, ಪ್ರದೀಪ್, ಸ್ಟುಡಿಯೋ ರಂಗ, ರಮೇಶ್ ಇತರರು ಭಾಗವಹಿಸಿದ್ದರು.

ಏಕಾಂತ ರಾಮೇಶ್ವರ ದೇವಾಲಯದಲ್ಲಿ ಪೂಜೆ: ಕೋಟೆ ದೊಡ್ಡಮನೆ ಛತ್ರದ ಬೀದಿಯಲ್ಲಿರುವ ಏಕಾಂತರಾಮೇಶ್ವರ ದೇವಾಲಯದಲ್ಲಿ ಬುಧವಾರ ರಾಮನವಮಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಪಾನಕ ವಿತರಿಸಲಾಯಿತು. ರಾಮಪ್ರಸನ್ನ, ಜಯಪ್ರಕಾಶ್, ಭಗವಾನ್, ಜಯರಾಂ ಭಟ್, ವಿಜಯಕುಮಾರ್, ಭಾಗವಹಿಸಿದ್ದರು. ಅರ್ಚಕ ವೆಂಕಟೇಶ್ ಪೂಜಾ ವಿಧಿ ವಿಧಾನ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net