ನವಗ್ರಹ ಮತ್ತು ಮೃತ್ಯುಂಜಯ ಹೋಮ

homa
Published on

ಕುಶಾಲನಗರ:

ಕುಶಾಲನಗರದ ಶ್ರೀ ಸೋಮೇಶ್ವರ ದೇವಾಲಯ ಸಮಿತಿ ವತಿಯಿಂದ ಗುರುವಾರ ನವಗ್ರಹ ಹೋಮ ಹಾಗೂ  ಮೃತ್ಯುಂಜಯ ಹೋಮ ಏರ್ಪಡಿಸಲಾಗಿತ್ತು. ಆಷಾಢ ಮಾಸ ಮುಗಿದು ಶ್ರಾವಣ ಮಾಸ ಬರುತ್ತಿರುವ ಹೊತ್ತಿನಲ್ಲಿ ಲೋಕಕಲ್ಯಾಣಾರ್ಥ ಮೃತ್ಯುಂಜಯ ಹೋಮ ಹಮ್ಮಿಕೊಂಡ ಬಗ್ಗೆ ದೇವಾಲಯ ಸಮಿತಿ ಅಧ್ಯಕ್ಷ ಎಂ.ಕೆ. ದಿನೇಶ್ ಮಾಹಿತಿ ನೀಡಿದರು.

ದೇವಾಲಯದ ಪ್ರಧಾನ ಅರ್ಚಕ ಸುಬ್ರಮಣ್ಯ ದೀಕ್ಷಿತ್ ನೇತೃತ್ವದಲ್ಲಿ ಕುಶಾಲನಗರದ ವಿವಿಧ ದೇವಾಲಯಗಳ ಅರ್ಚಕರಾದ ಪ್ರಸನ್ನ ಭಟ್, ಪರಮೇಶ್ವರ ಭಟ್, ಪ್ರಸನ್ನ ಗಾಂವ್ಕರ್, ಹರಿ ಭಟ್ ಪೂಜಾ ವಿಧಿಗಳನ್ನು ನಡೆಸಿಕೊಟ್ಟರು. ಬಳಿಕ ಶ್ರೀ ಸೋಮೇಶ್ವರ ದೇವರನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ ಮಹಾ ಪೂಜೆ ಮಂಗಳಾರತಿ ನಡೆಸಲಾಯಿತು.

ದೇವಾಲಯ ಸಮಿತಿ ಕಾರ್ಯದರ್ಶಿ ಎಸ್.ಕೆ. ಶ್ರೀನಿವಾಸ ರಾವ್, ಟ್ರಸ್ಟಿಗಳಾದ ಬಿ. ಅಪ್ಪಣ್ಣ, ಎಂ.ಎಸ್. ಶಿವಾನಂದ, ಚಂದ್ರು ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net