ಎಡಮಕ್ಕಿಯಲ್ಲಿ ಮಹಾ ಸುದರ್ಶನ ಹೋಮ

vpt 1.1 HOOMA 1
Published on

ವಿರಾಜಪೇಟೆ : ವಿರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದ ಎಡಮಕ್ಕಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಹಾ ಸುದರ್ಶನ ಹೋಮ ಮತ್ತು ಭಗವತಿ ದೇವಿಯ ಸೇವೆ ಶ್ರದ್ದಾ ಭಕ್ತಿಯಿಂದ ನಡೆಯಿತು. ಬುಧವಾರ ಮತ್ತು ಗುರುವಾರ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ದೀಪಾರಾಧನೆ, ಮಹಾ ಸುದರ್ಶನ ಹೋಮ ಮತ್ತು ಭಗವತಿ ಸೇವೆ ಸಂಪನ್ನಗೊಂಡಿತು. ಸಂಜೆ ಮಹಾಪೂಜೆಯ ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ಸೇವೆ ನಡೆಯಿತು. ಇದೇ ಸಂದರ್ಭ ಮಹಾಗಣಪತಿ ಹೋಮ, ಮಹಾಪೂಜೆ ನೆರವೇರಿದ್ದು, ನೂರಾರು ಭಕ್ತರು ಹಾಜರಿದ್ದರು.
ದೇವಸ್ಥಾನದ ತಂತ್ರಿಗಳಾದ ಮುಲ್ಲಪಲ್ಲಿ ಕೃಷ್ಣನ್, ನಂಬೂದಿರಿ ಪಾಡ್ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ಬಿ. ಎಸ್. ವೇಣುಗೋಪಾಲ್ ನೇತೃತ್ವ ವಹಿಸಿದ್ದರು. ದೇವಸ್ಥಾನದ ಆಡಳಿತ ಮಂಡಳಿ ಪ್ರಮುಖರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net