ದೈವಬಲದಿಂದ ಸರ್ವ ಯಶಸ್ಸು ಸಾಧ್ಯ

homa
ಪ್ರತ್ಯಂಗಿರಾ ಹೋಮ
Published on

ವಿಜಯವಾಣಿ ಸುದ್ದಿಜಾಲ ನಂದಗುಡಿ
ಹಣದಿಂದ ಜ್ಞಾನ ಪಡೆಯಲು ಸಾಧ್ಯವಿಲ್ಲ, ಸಕಲ ಶಕ್ತಿ ಪಡೆಯಲು ಶುದ್ಧ ಮನಸ್ಸಿನಿಂದ ಭಗವಂತನ ಸ್ಮರಣೆ ಅವಶ್ಯಕ. ಭಕ್ತಿ ಮಾರ್ಗದಿಂದ ಜ್ಞಾನಸಿದ್ಧಿ ಗಳಿಸಲು ಸಾಧ್ಯ ಎಂದು ಭದ್ರಕಾಳಿ ಮಹಾಶಕ್ತಿ ಪೀಠದ ಸಂಸ್ಥಾಪಕ ಶ್ರೀ ಡಾ.ಡಿ.ಎಲ್.ವೀರಬ್ರಹ್ಮ ಆಚಾರಿ ಗುರೂಜಿ ಹೇಳಿದರು.
ಪಟ್ಟಣ ಸಮೀಪದ ದೊಡ್ಡನಲ್ಲೂರಹಳ್ಳಿಯ ಸುಪ್ರಸಿದ್ಧ ಶ್ರೀ ಭದ್ರಕಾಳಿ ಮಹಾಶಕ್ತಿ ಪೀಠದಲ್ಲಿ ಎಳ್ಳ ಅಮಾವಾಸ್ಯೆ ಪ್ರಯುಕ್ತ ಲೋಕ ಕಲ್ಯಾಣಾರ್ಥ ಹಮ್ಮಿಕೊಂಡಿದ್ದ ಪ್ರತ್ಯಂಗಿರಾ ಹೋಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವಾಲಯಗಳು ಮಾನವನ ಅಂತರಾಳದಲ್ಲಿ ಇರುವ ಮಾನಸಿಕ ವೇದನೆ, ಒತ್ತಡ, ಅಶಾಂತಿ ದೂರ ಮಾಡಿ ಶಾಂತಿ, ನೆಮ್ಮದಿ ನೀಡುವ ಶ್ರದ್ಧಾ ಕೇಂದ್ರವಾಗಿವೆ. ಮನುಷ್ಯನಲ್ಲಿ ಆಡಂಭರ ತೋರಿಕೆ ಹೆಚ್ಚಾಗುತ್ತಿದ್ದು, ಹಣಕ್ಕಿಂತ ಗುಣವಂತನಾಗಿ ಬಾಳಬೇಕು. ವಿದ್ಯೆ ಹಾಗೂ ವ್ಯಕ್ತಿತ್ವ ಜೀವಕ್ಕಿಂತ ಮಿಗಿಲಾಗಿದ್ದು, ಪ್ರೀತಿ, ವಾತ್ಸಲ್ಯ, ಬಾಂಧವ್ಯ ಮರೆತು ಹೋಗುತ್ತಿದ್ದು, ಪ್ರತಿಯೊಬ್ಬರಿಗೂ ಜೀವನದಲ್ಲಿ ಬದ್ಧತೆ ಇರಬೇಕು ಎಂದರು.
ಪ್ರತ್ಯಂಗಿರಾ ಹೋಮ ಅಂಗವಾಗಿ ಹೋಮ, ಹವನ, ಸಂಕಲ್ಪ ಸಿದ್ಧಿ ಕಾರ್ಯಕ್ರಮ ಮತ್ತು ಅನ್ನ ಸಂತರ್ಪಣೆಯನ್ನು ರವಿಸುತ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net