ಪವಿತ್ರ ಮೃತ್ತಿಕೆ ಅಯೋಧ್ಯೆಗೆ ರವಾನೆ

People sent holy soil to ram janmabhoomi ayodhya.
Published on

ಅಂಕೋಲಾ: ತಾಲೂಕಿನ ರಾಮನಗುಳಿಯ ರಾಮಪಾದುಕಾ ದೇವಸ್ಥಾನ ಹಾಗೂ ಅರಬೈಲ್​ನ ಮಾರುತಿ ದೇವಸ್ಥಾನದಿಂದ ಪವಿತ್ರ ಮೃತ್ತಿಕೆ ಯನ್ನು ಸಂಗ್ರಹಿಸಿ ರಾಮಜನ್ಮ ಭೂಮಿ ಅಯೋಧ್ಯೆಗೆ ಕಳುಹಿಸಿಕೊಡುವ ಕಾರ್ಯ ಮಂಗಳವಾರ ವೇ. ಗಣಪತಿ ಭಟ್ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು.

ಇದಕ್ಕೂ ಪೂರ್ವ ದೇವಸ್ಥಾನ ಹಾಗೂ ಮಾರುತಿ ದೇವಸ್ಥಾನದ ಈ ಎರಡೂ ಮಂದಿರದ ಮೃತ್ತಿಕೆಯನ್ನು ಸಂಗ್ರಹಿಸಿ ಉತ್ತರ ಪ್ರದೇಶದಲ್ಲಿರುವ ರಾಮ ಜನ್ಮ ಭೂಮಿ ಅಯೋಧ್ಯೆಗೆ ಕಳುಹಿಸಿಕೊಡುವ ಕಾರ್ಯ ಮಾಡಲಾಯಿತು.

ಶತಮಾನಗಳ ಕನಸಾಗಿದ್ದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಈ ವರ್ಷಾಂತ್ಯಕ್ಕೆ ಮಂದಿರ ನಿರ್ಮಾಣ ಪೂರ್ಣಗೊಂಡು 2024 ಜನವರಿಯಲ್ಲಿ ದೇವರ ಪ್ರತಿಷ್ಠಾಪನಾ ಕಾರ್ಯ ನೆರವೇರಲಿದೆ ಎಂಬ ಮಾಹಿತಿ ಇದೆ.

ಮೃತ್ತಿಕೆ ಸಂಗ್ರಹ ಕಾರ್ಯಕ್ರಮದಲ್ಲಿ ಹಿರಿಯ ಗಣ್ಯರು, ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net