ಅಂಗನವಾಡಿ ಪುಟಾಣಿಗಳಿಗೆ ಬೇಸಿಗೆ ರಜೆ

anganavadi
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಅಂಗನವಾಡಿ ಪುಟಾಣಿಗಳಿಗೆ ಬೇಸಿಗೆ ರಜೆ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಮೇ 15ರಿಂದಲೇ ರಜೆ ೋಷಣೆಯಾಗಿದ್ದು, ಮಕ್ಕಳು ಅಂಗವಾಡಿಗಳಿಗೆ ಹೋಗಿಬರಬೇಕಾದ ಸಂಕಷ್ಟದಿಂದ ಪಾರಾದಂತಾಗಿದೆ.
ಬೇಸಿಗೆ ರಜೆ ಅಂತ್ಯವಾಗುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಶಾಲೆಗಳು ಪುನಾರಂಭಗೊಳ್ಳಲಿವೆ. ಆದರೆ ಅಂಗನವಾಡಿಗಳ ರಜೆಗೆ ಚುನಾವಣೆ ತೊಡಕಾಗಿತ್ತು. ಈ ಬಾರಿ ಬಿಸಿಲಿನ ಝಳಕ್ಕೆ ಸಾಮಾನ್ಯ ಜನರೇ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿರುವ ಸನ್ನಿವೇಶ ಎದುರಾಗಿದ್ದರೂ ಪುಟಾಣಿಗಳು ಹೋಗಿ ಬರಬೇಕಾದ ಪರಿಸ್ಥಿತಿ ಇತ್ತು. ಪಾಲಕರೂ ಮಕ್ಕಳಿಗೆ ರಜೆ ೋಷಣೆ ಮಾಡಲಿ ಎಂದು ಎದುರು ನೋಡುತ್ತಿದ್ದರು. ಕಡೆಗೂ ರಜೆಗೆ ಅಧಿಕೃತ ಆದೇಶ ಜಾರಿಯಾಗಿರುವುದಕ್ಕೆ ಪಾಲಕರು ನಿಟ್ಟುಸಿರು ಬಿಟ್ಟಿದ್ದಾರೆ.

53 ಸಾವಿರ ಮಕ್ಕಳು:
ಹೊಸಕೋಟೆ, ನೆಲಮಂಗಲ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಸೇರಿ ಸುಮಾರು 53 ಸಾವಿರ ಪುಟ್ಟ ಮಕ್ಕಳ ದಾಖಲಾತಿ ಇದೆ. 1,230 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ವರ್ಷ ಮೇ ಆರಂಭದಲ್ಲೇ ಕನಿಷ್ಠ 2 ವಾರ ರಜೆ ೋಷಿಸಲಾಗುತ್ತಿತ್ತು. ಆದರೆ ಈ ಬಾರಿ ಚುನಾವಣೆ ಬಳಿಕಷ್ಟೇ ರಜೆ ಎಂಬ ಹಿನ್ನೆಲೆಯಲ್ಲಿ ರಜೆ ನೀಡಲು ತಡವಾಗಿತ್ತು. ಮೇ 13 ರಂದು ಚುನಾವಣಾ ಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಮೇ 15ರಿಂದ ಅಂಗನವಾಡಿಗಳಿಗೆ ರಜೆ ೋಷಿಸಲಾಗಿದೆ.

ಬಿಸಿಲಿಗೆ ಬಸವಳಿಯುತ್ತಿದ್ದ ಮಕ್ಕಳು:
ಜಿಲ್ಲೆಯಲ್ಲಿ ಈ ಬಾರಿ ಹೆಚ್ಚು ತಾಪಮಾನ ದಾಖಲಾಗುತ್ತಿದೆ, ಜಿಲ್ಲೆಯಲ್ಲಿ ಭಾಗಶಃ ಅಂಗನವಾಡಿ ಕಟ್ಟಡಗಳ ವಿಸ್ತೀರ್ಣ ಚಿಕ್ಕದಾಗಿದೆ. ಕೆಲವು ಕಡೆಗಳಲ್ಲಿ ಗಾಳಿ ಬೆಳಕಿಗೂ ತೊಂದರೆ ಇದೆ. ಬಾಡಿಗೆ ಕಟ್ಟಡಗಳಲ್ಲಿ ಅನೇಕ ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ, ಇಂಥ ಕಡೆಗಳಲ್ಲಿ ಬೇಸಿಗೆಯ ಝಳಕ್ಕೆ ಪುಟಾಣಿಗಳು ಬಸವಳಿಯುತ್ತಿದ್ದವು. ಮೇ ಆರಂಭದಿಂದಲೇ ಅನೇಕ ಅಂಗವಾಡಿಗಳಲ್ಲಿ ಮಕ್ಕಳ ಹಾಜರಾತಿಯೂ ತಗ್ಗಿತ್ತು. ಅಂದಾಜಿನ ಪ್ರಕಾರ ಶೇ.40 ಮಕ್ಕಳು ಅಂಗನವಾಡಿ ಕಡೆಗೆ ತಲೆಹಾಕುತ್ತಿಲ್ಲ ಎಂಬ ಮಾಹಿತಿ ಇದೆ.

ಶಿಕ್ಷಕಿಯರೂ ಹೈರಾಣ:
ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ಅಂಗನವಾಡಿ ಶಿಕ್ಷಕಿಯರನ್ನು ಬಳಸಿಕೊಳ್ಳಲಾಗಿತ್ತು. ಬೆಳಗ್ಗೆಯಿಂದ ಅಂಗನವಾಡಿಯಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ ಚುನಾವಣಾ ಕರ್ತವ್ಯ ನಿರ್ವಹಿಸಬೇಕಾಗಿತ್ತು. ಇದರಿಂದ ಶಿಕ್ಷಕಿಯರೂ ಹೈರಾಣಾಗಿದ್ದರು. ಅಂಗನವಾಡಿ ಕೆಲಸ ಹಾಗೂ ಚುನಾವಣಾ ಕರ್ತವ್ಯದ ಒತ್ತಡದಿಂದ ಶಿಕ್ಷಕಿಯರಿಗೂ ರಿಲ್ೀ ಸಿಕ್ಕಂತಾಗಿದೆ.

ಸಿಬ್ಬಂದಿಗೂ ಸವಾಲು:
ಬಿರು ಬೇಸಿಗೆಯಲ್ಲಿ ಪುಟಾಣಿ ಮಕ್ಕಳ ಆರೈಕೆ ಅಂಗನವಾಡಿ ಶಿಕ್ಷಕಿಯರಿಗೆ ಹಾಗೂ ಸಿಬ್ಬಂದಿಗೆ ಸವಾಲಿನ ಕೆಲಸವಾಗಿದೆ. ಮಕ್ಕಳಿಗೆ ಕಾಲಕಾಲಕ್ಕೆ ನೀರು ಕುಡಿಸಬೇಕು. ಇಲ್ಲವಾದರೆ ತಲೆ ಸುತ್ತು ಬರುವುದು ಮತ್ತಿತರ ಎಡವಟ್ಟಿಗೆ ಕಾರಣವಾಗುತ್ತದೆ. ಸಾಂಕ್ರಾಮಿಕ ರೋಗಗಳು ಬೇಗ ಹರಡುವುದರಿಂದ ಮಕ್ಕಳ ಆರೋಗ್ಯ ವಿಚಾರದಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಬೇಕಾಗುತ್ತದೆ, ಚೆನ್ನಾಗಿ ಗಾಳಿ ಬೆಳಕು ಇರುವಂತೆ ನೋಡಿಕೊಳ್ಳಬೇಕು.

ಸಾಮಾನ್ಯವಾಗಿ ಮೇ ಮೊದಲ ಅಥವಾ ಎರಡನೇ ವಾರ ಅಂಗನವಾಡಿಗಳಿಗೆ ರಜೆ ೋಷಿಸಲಾಗುತ್ತಿತ್ತು. ಈ ಬಾರಿ ಚುನಾವಣೆ ಕಾರಣದಿಂದ ಸ್ವಲ್ಪ ತಡವಾಗಿತ್ತು. ಮೇ 15 ರಿಂದ 29 ರವರೆಗೆ ಅಧಿಕೃತವಾಗಿ ರಜೆ ೋಷಿಸಲಾಗಿದೆ. ಅಂಗನವಾಡಿಗಳಲ್ಲಿ ಮಕ್ಕಳಿಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸಿರುವುದರಿಂದ ಯಾವುದೇ ತೊಂದರೆ ಎದುರಾಗಿಲ್ಲ.
ನಟರಾಜ, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಪ್ರಸ್ತುತ ಬಿರುಬಿಸಿಲಿನಿಂದ ತಾಪಮಾನ ಹೆಚ್ಚಳವಾಗಿದೆ. ಚಿಕ್ಕ ಮಕ್ಕಳಿಗೆ ಅರೋಗ್ಯ ಸಮಸ್ಯೆ ಕಾಡುತ್ತದೆ, ಇಂಥ ಸಂದರ್ಭದಲ್ಲಿ 2 ವಾರ ರಜೆ ೋಷಿಸಿರುವುದು ಸ್ವಾಗತಾರ್ಹ. ಬೇಸಿಗೆ ವೇಳೆ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು, ಅಂಗನವಾಡಿಗಳನ್ನು ಮತ್ತಷ್ಟು ಮೇಲ್ದರ್ಜೆಗೇರಿಸಿದರೆ ಉತ್ತಮ.
ರತ್ನಮ್ಮ, ಪಾಲಕರು, ಹೊಸಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net