ಮುಂಡಗೋಡ ತಾಲೂಕಿನ 3 ಶಾಲೆಗಳಿಗೆ ರಜೆ ಘೋಷಣೆ

shcool
ಮುಂಡಗೋಡ ತಾಲೂಕಿನ ಓರಲಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ.
Published on

ಮುಂಡಗೋಡ: 3-4 ದಿನಗಳಿಂದ ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಶಾಲೆಯ ಕಟ್ಟಡ ಸೋರುತ್ತಿರುವುದರಿಂದ ಹಾಗೂ ಕಾಲುವೆಗಳನ್ನು ದಾಟಿಕೊಂಡು ಶಾಲೆಗೆ ಬರಲು ಮಕ್ಕಳಿಗೆ ತೊಂದರೆಯಾಗುತ್ತಿರುವ ಪರಿಣಾಮ ತಾಲೂಕಿನ ಮೂರು ಶಾಲೆಗಳಿಗೆ ಶುಕ್ರವಾರ ರಜೆ ಘೋಷಣೆ ಮಾಡಲಾಗಿದೆ.

ತಾಲೂಕಿನ ಓಣಿಕೇರಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಹಾಗೂ ಓರಲಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡಗಳ ಮೇಲ್ಛಾವಣಿ ಸೋರುತ್ತಿದ್ದು, ಬಿಸಿಯೂಟ ತಯಾರಿಕೆ ಕೊಠಡಿಯೂ ಸೋರುತ್ತಿರುತಿವೆ. ಬೆಡಸಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಮ್ಮಚ್ಗಿ ಗ್ರಾಮದ ಶಾಲೆಗೆ ಅಕ್ಕಪಕ್ಕದ ಪ್ರದೇಶಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ.

ವಿದ್ಯಾರ್ಥಿಗಳು ಶಾಲೆಗೆ ಬರುವ ಮಾರ್ಗದಲ್ಲಿ ದೊಡ್ಡ ದೊಡ್ಡ ಕಾಲುವೆಗಳಿವೆ. ಈ ಕಾಲುವೆಗಳಲ್ಲಿ ಮಳೆಯ ನೀರು ಜೋರಾಗಿ ಹರಿಯುತ್ತಿರುವ ಪರಿಣಾಮದಿಂದ ಮುಂಜಾಗ್ರತಾ ಕ್ರಮವಾಗಿ ಈ ಮೂರು ಶಾಲೆಗಳಿಗೆ ಮುಂದಿನ ಆದೇಶದವರೆಗೂ ರಜೆ ಘೋಷಣೆ ಮಾಡಲಾಗಿದೆ ಎಂದು ತಹಸೀಲ್ದಾರ್ ಶಂಕರ ಗೌಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net