ಹೋಳಿ ನಿಮಿತ್ತ ಸ್ನೇಹ ಮಿಲನ

IMG-20250315-WA0011.jpg
Published on

ಹುಬ್ಬಳ್ಳಿ: ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಸಮಾಜ ಸೇವಕ ಶಾಂತರಾಜ ಪೋಳ ಹಾಗೂ ಗೆಳೆಯರ ಬಳಗದ ವತಿಯಿಂದ ನಗರದ ಶ್ರೀನಿವಾಸ್ ಗಾರ್ಡನ್ ನಲ್ಲಿ ಸ್ನೇಹ ಮಿಲನ ಹಮ್ಮಿಕೊಳ್ಳಲಾಗಿತ್ತು.

ಖ್ಯಾತ ವೈದ್ಯ ಡಾ. ರವಿ ಕಲಘಟಗಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮಹಾಪೌರ ಡಾ. ಪಾಂಡುರಂಗ ಪಾಟೀಲ, ಡಾ. ಆಶೋಕ ಕಲಮದಾನಿ, ಬ್ರಾಹ್ಮಣ ಸಮಾಜದ ಮುಖಂಡ ಎ.ಸಿ. ಗೋಪಾಲ ಮುಂತಾದವರು ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಕಳೆದ 25 ವರ್ಷಗಳಿಂದ ಈ ಸ್ನೇಹ ಮಿಲನ ನಡೆಯುತ್ತ ಬಂದಿದ್ದು, ಪ್ರತಿಯೊಬ್ಬರ ಬದುಕಿಗೆ ಬಣ್ಣ ತುಂಬಿ ಸಂತೋಷ ಮೂಡಿಸುವ ಹಬ್ಬವನ್ನು ಪರಸ್ಪರ ಪ್ರೀತಿ, ಸಂಭ್ರಮದಿಂದ ಆಚರಿಸಲು ಮನವಿ ಮಾಡಿದರು.

ಡಾ. ಸುರೇಶ ಕೊರ್ಲಹಳ್ಳಿ, ಉದ್ಯಮಿಗಳಾದ ಪ್ರಕಾಶ ಕೊಠಾರಿ, ಸಂಜಯ ನಿರಂಜನ, ಭವರಲಾಲ ಸಿ. ಜೈನ, ಶ್ರೀನಿವಾಸ ಘಂಟಸಾಲ, ಪ್ರಹ್ಲಾದರಾವ, ಸಿಎ ಭರತ ಭಂಡಾರಿ, ಅಶೋಕ ಭಂಡಾರಿ, ಪತ್ರಕರ್ತ ಗುರುರಾಜ ಹೂಗಾರ, ಡಾ. ತೆಗ್ಗಿಮನಿ, ವಾಲಿ, ವೆಂಕಟೇಶ ಹುಟಗಿ ಪಾಲ್ಗೊಂಡಿದ್ದರು.

ಸಂಘಟಕ ಶಾಂತರಾಜ ಪೋಳ ಪ್ರಾಸ್ತಾವಿಕ ಮಾತನಾಡಿದರು. ರಾಜೇಂದ್ರ ಹರ್ದಿ ಸ್ವಾಗತಿಸಿದರು. ಪತ್ರಕರ್ತ ಗಣಪತಿ ಗಂಗೊಳ್ಳಿ ವಂದಿಸಿದರು.

ನಾಗರಿಕ ವೇದಿಕೆ:
ಪ್ರಸಕ್ತ ಬಿಆರ್ ಟಿಎಸ್ ಯೋಜನೆ ಸೇರಿ ಇತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜಕೀಯೇತರವಾಗಿ ನಾಗರಿಕ ವೇದಿಕೆಯನ್ನು ಸ್ಥಾಪಿಸಲು ಸಭೆಯಲ್ಲಿ ಚಿಂತಿಸಲಾಯಿತು. ಮುಂದಿನ ದಿನಗಳಲ್ಲಿ ಇದಕ್ಕಾಗಿ ಪ್ರತ್ಯೇಕ ಸಭೆ ಕರೆಯಲು ನಿರ್ಧರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net