ಹೋಳಿ ಶಾಂತಿಸಭೆ ಮಾ.1ರಂದು

Published on

ಹಾವೇರಿ: ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಮಾ.1ರಂದು ಸಂಜೆ 4 ಗಂಟೆಗೆ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಶಹರ ಪೊಲೀಸ್ ಠಾಣೆ ಆವರಣದಲ್ಲಿ ಶಾಂತಿಸಭೆ ಆಯೋಜಿಸಲಾಗಿದೆ.
ಪೊಲೀಸ್ ಅಧಿಕ್ಷಕ ಡಾ.ಶಿವಕುಮಾರ ಗುಣಾರೆ, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಸಿ.ಗೋಪಾಲ ಸಮ್ಮುಖದಲ್ಲಿ ಸಭೆ ಆಯೋಜಿಸಲಾಗಿದೆ. ಸಭೆಗೆ ಹೋಳಿ ಕಾಮಣ್ಣ ನ ಮೂರ್ತಿ ಪ್ರತಿಷ್ಠಾಪಕರು, ಕಾಮಣ್ಣ ಮಂಡಳಿ ಆಯೋಜಕರು, ನಗರ ಸಭೆ ಅಧ್ಯಕ್ಷರು, ಸದಸ್ಯರು, ಹಿಂದು- ಮುಸ್ಲಿಂ ಸಮುದಾಯದ ಮುಖಂಡರು ಸಭೆಗೆ ಹಾಜಾರಾಗುವಂತೆ ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net