ಕುಂದಾನಗರಿಯಲ್ಲಿ ಹೋಳಿ ಸಂಭ್ರಮ

IMG-20230307-WA0012.jpg
Published on


ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಮಂಗಳವಾರ ಹೋಳಿ ಹಬ್ಬದ ಸಂಭ್ರಮ ಜೋರಾಯಿತು.
ನಗರದಲ್ಲಿ ಸಡಗರ, ಸಂಭ್ರಮದಿಂದ ರಂಗುರಂಗಿನ ಹೋಳಿ ಹಬ್ಬ ಆಚರಿಸಲಾಯಿತು. ಯುವಕರು, ಯುವತಿಯರು, ಮಕ್ಕಳು ಪರಸ್ಪರ ಬಣ್ಣ ಎರಚಿ ಸಂತಸಪಟ್ಟರು. ಕೆಂಪು, ಹಳದಿ, ನೇರಳೆ, ಹಸಿರು ಸೇರಿದಂತೆ ವಿವಿಧ ಬಣ್ಣಗಳನ್ನು ಎರಚುತ್ತಾ ಖುಷಿಪಟ್ಟರು.
ಯುವಕರು, ಯುವತಿಯರೂ ಕೂಡ ಟ್ರಿಪಲ್ ರೈಡ್ ಮಾಡಿ ಬೀದಿ ಸುತ್ತಿ ಬಣ್ಣದಾಟವಾಡಿದರು. ಕಾಲೇಜು ರಸ್ತೆ, ಖಡಕ್‌ಗಲ್ಲಿ, ಗಣಪತಿಗಲ್ಲಿ, ಚವಾಟ್‌ಗಲ್ಲಿ, ಕಂಗ್ರಾಳಗಲ್ಲಿ, ತೆಂಗಿನಕೇರಿಗಲ್ಲಿ, ಸಿವಿಲ್ ಆಸ್ಪತ್ರೆ ರಸ್ತೆ,  ಮಾಧ್ವಾ ರಸ್ತೆ, ಕಾಂಗ್ರೆಸ್ ರಸ್ತೆ, ಆರ್‌ಪಿಡಿ ಕ್ರಾಸ್ ಜನಜಂಗುಳಿಯಿಂದ ಕೂಡಿತ್ತು. ನಗರದ ರಸ್ತೆಗಳೆಲ್ಲವೂ ಬಣ್ಣ ಬಣ್ಣಗಳಿಂದ ಚಿತ್ತಾರದ ರೂಪ ಪಡೆದುಕೊಂಡಿದ್ದವು.
ಸದಾಶಿವ ನಗರ, ನೆಹರು ನಗರ, ರಾಮನಗರ, ಹನುಮಾನ ನಗರ, ಚನ್ನಮ್ಮ ನಗರ, ಮಹಾಂತೇಶನಗರ, ಆಂಜನೇಯನಗರದ ನಿವಾಸಿಗಳು ಬಣ್ಣ ಎರಚಿ ಕುಣಿದು ಕುಪ್ಪಳಿಸಿದರು. ಸೋಮವಾರ ರಾತ್ರಿಯಿಂದಲೇ ಅಲ್ಲಲ್ಲಿ ಧ್ವನಿವರ್ಧಕ ಹಚ್ಚಿದ ಯುವಕರು ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net