ಗಡಿಗೆ ಒಡೆಯುವ ಸ್ಪರ್ಧೆಯ ಹಲಗೆ ಮೆರವಣಿಗೆ

13 Dwd 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಹೋಳಿ ಹಬ್ಬದ ಅಂಗವಾಗಿ ನಗರದ ವಿನಯ ಕುಲಕರ್ಣಿ ಬ್ರಿಗೇಡ್ ವತಿಯಿಂದ ಆಯೋಜಿಸಿರುವ ಧಾರವಾಡ ಹಲಗೆ ಹಬ್ಬ ಹಾಗೂ ಗಡಿಗೆ ಒಡೆಯುವ ಸ್ಪರ್ಧೆ ಮತ್ತು ರೇನ್ ಡ್ಯಾನ್ಸ್ ಕಾರ್ಯಕ್ರಮದ ಪ್ರಯುಕ್ತ ನಗರದಲ್ಲಿ ಗುರುವಾರ ಹಲಗೆ ಮೆರವಣಿಗೆ ನಡೆಯಿತು.

ವಿನಯ ಕುಲಕರ್ಣಿ ಬ್ರಿಗೇಡ್ ವತಿಯಿಂದ ಇದೇ ಮೊದಲ ಬಾರಿ ಮಾ. 15ರಂದು ಶಿವಾಜಿ ವೃತ್ತದಲ್ಲಿ ಗಡಿಗೆ ಒಡೆಯುವ ಸ್ಪರ್ಧೆ ಮತ್ತು ರೇನ್ ಡ್ಯಾನ್ಸ್ ಆಯೋಜಿಸಲಾಗಿದೆ. ಅದರ ಅಂಗವಾಗಿ ಕಲಾಭವನ ಮೈದಾನದಲ್ಲಿ ನಡೆದ ಹಲಗೆ ಮೆರವಣಿಗೆಗೆ ಕೆಎಂಎಫ್ ನಿರ್ದೇಶಕಿ ಶಿವಲೀಲಾ ಕುಲಕರ್ಣಿ ಚಾಲನೆ ನೀಡಿದರು. ಕಲಾಭವನದಿಂದ ಅಂಜುಮನ್ ವೃತ್ತ , ವಿವೇಕಾನಂದ ವೃತ್ತ, ಸುಭಾಸ ರಸ್ತೆ, ಗಾಂಽ ಚೌಕ್, ರೀಗಲ್ ವೃತ್ತದ ಮುಖಾಂತರ ಶಿವಾಜಿ ವೃತ್ತ ತಲುಪಿತು.

ಮೆರವಣಿಗೆಯಲ್ಲಿ ವಿವಿಧ ಜಗ್ಗಲಿಗೆ ಮಜಲುಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಯುವಕರು ಮತ್ತು ವಿನಯ ಕುಲಕರ್ಣಿ ಬ್ರಿಗೇಡ್ ಕಾರ್ಯಕರ್ತರು ಹಲಗೆ ಬಾರಿಸುತ್ತ ಮೆರವಣಿಗೆಯಲ್ಲಿ ಸಾಗಿದರು.

ಅರವಿಂದ ಏಗನಗೌಡರ, ಪ್ರಕಾಶ ಘಾಟಗೆ, ಈಶ್ವರ ಶಿವಳ್ಳಿ, ಆನಂದ ಸಿಂಗನಾಥ, ಸಂಜೀವ ಲಕಮನಹಳ್ಳಿ, ಕಿಶೋರ ಬಡಿಗೇರ, ವಿನಯ ಬಾಬರ, ಈಶ್ವರ ಹಂಚಿನಾಳ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net