ಹೋಳಿ ಹಬ್ಬದ ಬೃಹತ್ ಹಲಗೆ ಸಂಚಲನ

9 Dwd 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಹೋಳಿ ಹುಣ್ಣಿಮೆ ಆಚರಣಾ ಸಮಿತಿಯಿಂದ ಹೋಳಿ ಹಬ್ಬದ ಅಂಗವಾಗಿ ನಗರದಲ್ಲಿ ಭಾನುವಾರ ಬೃಹತ್ ಹಲಗೆ ಸಂಚಲನ ನಡೆಸಲಾಯಿತು.

ಇಲ್ಲಿನ ಕಾಮನಕಟ್ಟಿಯ ಶ್ರೀ ಪ್ಯಾಟಿ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಗದಗಯ್ಯ ಸ್ವಾಮೀಜಿ ಹಲಗೆ ಸಂಚಲನಕ್ಕೆ ಚಾಲನೆ ನೀಡಿದರು. `ಜಾನಪದ ಸೊಗಡಿನ ಹೋಳಿ ಹುಣ್ಣಿಮೆ ಆಚರಿಸಿ ಹಿಂದು ಸಂಪ್ರದಾಯ ಉಳಿಸಿ' ಎಂಬ ಧ್ಯೇಯದೊಂದಿಗೆ ಹಲಗೆ ಸಂಚಲನ ನಡೆಯಿತು. ಎಲ್ಲ ಧರ್ಮ, ವರ್ಗಗಳ ಜನರು ಒಂದುಗೂಡಿ ಬಣ್ಣದಾಟ ಆಡುವ ಪ್ರಯುಕ್ತ ಹಲಗೆ ಬಾರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಯುವಕ- ಯುವತಿಯರು ಥರಹೇವಾರಿ ಹಲಗೆಗಳೊಂದಿಗೆ ಭಾಗವಹಿಸಿ ಸದ್ದು ಮಾಡಿದರು.

ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾಮಸೂತಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಮುಖಂಡರಾದ ಶಂಕರ ಶೆಳಕೆ, ಶಂಭು ಸಾಲಿಮನಿ, ನಿತಿನ್ ಇಂಡಿ, ರಾಕೇಶ ನಾಝರೆ, ಮಹೇಶ ಸುಲಾಖೆ, ಮೋಹನ ರಾಮದುರ್ಗ, ಓಂಕಾರ ರಾಯಚೂರ, ತಾನಾಜಿ ರೋಖಡೆ, ಬಸವರಾಜ ಬೆಣ್ಣಿ, ಸಿದ್ದು ಕಲ್ಯಾಣಶಟ್ಟಿ, ಪ್ರಮೋದ ಕಾರಕೂನ, ಪುಷ್ಪಾ ನವಲಗುಂದ, ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net