ಕೊಪ್ಪಳದಲ್ಲಿ ಹೋಳಿ ಹಬ್ಬದ ಸಂಭ್ರಮ: ಸೆಲ್ಫಿ ಕ್ಲಿಕ್ಕಿಸಿಕೊಂಡ ಯುವಕ, ಯುವತಿಯರು

07KKNR-03
ಕೊಪ್ಪಳದ ಹೋಳಿ ಹಬ್ಬದ ನಿಮಿತ್ತಿ ಸಂಸದ ಸಂಗಣ್ಣ ಕರಡಿ ಅವರು ಬಣ್ಣ ಹಾಕುವ ಮೂಲಕ ಯುವಕರೊಂದಿಗೆ ಕುಣಿದರು.
Published on

ಕೊಪ್ಪಳ: ಹೋಳಿ ಹಬ್ಬದ ನಿಮಿತ್ತ ಜಿಲ್ಲೆಯಾದ್ಯಂತ ಮಕ್ಕಳು, ಯುವಕ-ಯುವತಿಯರು, ಮಹಿಳೆಯರು ಬಣ್ಣದ ಓಕುಳಿ ಆಡಿ ಬುಧವಾರ ಸಂಭ್ರಮಿಸಿದರು.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೋಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಮಂಗಳವಾರ ತಡರಾತ್ರಿ ಕಾಮದಹನ ಮಾಡಿದ ಸಾರ್ವಜನಿಕರು ಮುಂಜಾನೆಯಿಂದ ಮಧ್ಯಾಹ್ನ ಪರಸ್ಪರ ವಿವಿಧ ಬಣ್ಣಗಳನ್ನು ಎರಚಿಕೊಂಡು ಸಂತಸ ಪಟ್ಟರು.


ನಗರದ ಗಡಿಯಾರ ಕಂಬ, ಜವಾಹರ ರಸ್ತೆ, ಪ್ಯಾಟಿ ಈಶ್ವರ ದೇವಸ್ಥಾನ, ಶಾರದಾ ಟಾಕೀಸ್ ಹತ್ತಿರ, ಟಾಂಗಾಕೂಟ ಹಾಗೂ ಭಾಗ್ಯನಗರದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕಾಮಣ್ಣ ಹಾಗೂ ರತಿದೇವಿಯ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ರಾತ್ರಿ ಸಾಂಸ್ಕ ೃತಿಕ ಕಾರ್ಯಕ್ರಮ ನಡೆಸಲಾಯಿತು. ಬಳಿಕ ರಾತ್ರಿ ಕಾಮದಹನ ಮಾಡಲಾಯಿತು. ಬಣ್ಣ ಹಚ್ಚಿಕೊಂಡ ಯುವತಿಯರು, ಮಕ್ಕಳು ಸೆಲ್ಪಿ ಕ್ಲಿಕ್ಕಿಸಿಕೊಂಡ ದೃಶ್ಯಗಳು ಸಾಮಾನ್ಯವಾಗಿತ್ತು.


ಸಂಸದ ಕರಡಿ ಕುಣಿತ
: ನಗರದ ಪ್ರಮುಖ ಬೀದಿಗಳಲ್ಲಿ ಹೋಳಿ ಹಬ್ಬದ ನಿಮಿತ್ತ ಯುವಕರೊಂದಿಗೆ ಪರಸ್ಪರರು ಬಣ್ಣ ಹಚ್ಚಿಕೊಂಡು ಸಂಸದ ಸಂಗಣ್ಣ ಕರಡಿ ಡಿಜೆ ಹಾಡಿಗೆ ಕುಣಿದು, ಕುಪ್ಪಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net