ಉಡುಪಿಯಲ್ಲಿ ಹೋಳಿ ಮೆರವಣಿಗೆ

holi celebration
Published on

ಉಡುಪಿ: ಹೋಳಿ ಹುಣ್ಣಿಮೆ ಪ್ರಯುಕ್ತ ಕೃಷ್ಣ ಮಠದಿಂದ ಕಡಿಯಾಳಿ ದೇವಸ್ಥಾನಕ್ಕೆ ಹೋಳಿ ಬಣ್ಣದ ಮೆರವಣಿಗೆ ಸೋಮವಾರ ಸಾಯಂಕಾಲ ನಡೆಯಿತು. ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರು ದೇವರೆದುರು ಪ್ರಾರ್ಥಿಸಿ ನೀಡಿದ ಬಣ್ಣಗಳು ಹಾಗೂ ಅಷ್ಟ ಮಠಗಳಿಂದ ಪಡೆದ ಬಣ್ಣಗಳನ್ನು ಮಠದ ಪಾರುಪತ್ತೆಗಾರರು, ಕೊಟ್ಟಾರಿಗಳು, ವಿದ್ವಾಂಸರು ಮೆರವಣಿಗೆಯಲ್ಲಿ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಬಣ್ಣವನ್ನು ಪ್ರಸಾದ ರೂಪದಲ್ಲಿ ಕೃಷ್ಣ ಮಠಕ್ಕೆ ವಾಪಸ್ ತರಲಾಯಿತು. ರಾತ್ರಿ ಮಠದಲ್ಲಿ ನಿತ್ಯೋತ್ಸವದ ಬಳಿಕ ರಥಬೀದಿಯ ಕಟ್ಟೆಯಲ್ಲಿ ಮನ್ಮಥ ದಹನ ನಡೆದು, ಸ್ವಾಮೀಜಿಯವರು ಬಣ್ಣವನ್ನು ಹಚ್ಚಿಕೊಂಡು ಭಕ್ತರಿಗೆ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net