ಹಂಪಿಯಲ್ಲಿ ಹೋಲಿ ಸಂಭ್ರಮ: ಬಣ್ಣಗಳಲ್ಲಿ ಮಿಂದೆದ್ದ ವಿದೇಶಿಗರು

IMG_20230308_100240.jpg
Published on

ಹೊಸಪೇಟೆ: ದಕ್ಷಿಣ ಕಾಶಿ ಹಂಪಿಯಲ್ಲಿ ಹೋಳಿ ಸಂಭ್ರಮ ಮನೆ ಮಾಡಿತ್ತು. ಸ್ಥಳೀಯರೊಂದಿಗೆ ಹೋಲಿ ಹಬ್ಬ ಆಚರಿಸಿದ ವಿದೇಶಿ ಪ್ರವಾಸಿಗರು, ಪರಸ್ಪರ ಮುಖಕ್ಕೆ ಬಣ್ಣ ಹಚ್ಚಿಕೊಂಡು‌ ಸಂಭ್ರಮಿಸಿದರು.


ಹೋಳಿ‌ ಹುಣ್ಣಿಮೆ ನಿಮಿತ್ತ ತಾಲೂಕಿನ ಐತಿಹಾಸಿಕ ಹಂಪಿಯ ರಥ ಬೀದಿಯಲ್ಲಿ ಮಂಗಳವಾರ ತಡ ರಾತ್ರಿ ಕಾಮ‌ ದಹನ ಮಾಡಲಾಯಿತು. ಬುಧವಾರ ಬೆಳಗ್ಗೆ ಸ್ಥಳೀಯರೊಂದಿಗೆ ವಿದೇಶಿಗರು ಹೋಲಿ ಆಚರಿಸಿದರು. ಒಬ್ಬರಿಗೊಬ್ಬರು ಬಣ್ಣ ಎರಚಿಕೊಂಡು, ಹ್ಯಾಪಿ ಹೋಲಿ ಎಂದು ಹರ್ಷೋದ್ಘಾರ ಮೊಳಗಿಸಿದರು.

ಇಲ್ಲಿನ‌ ಜನತಾ ಪ್ಲಾಟ್ ನಿಂದ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ವರೆಗೆ ಗುಂಪುಗೂಡಿಕೊಂಡು ಆಗಮಿಸಿದರು.
ಡ್ರಮ್ಸ್, ಹಲಗೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ನೆದರ್ ಲ್ಯಾಂಡ್, ಇಂಗ್ಲೆಂಡ್, ಇಸ್ರೇಲ್, ಫ್ರಾನ್ಸ್ ,  ಸೇರಿದಂತೆ ವಿಶ್ವದ ನಾನಾ ದೇಶಗಳಿಂದ ಆಗಮಿಸಿದ್ದ ಪ್ರವಾಸಿಗರು, ಬಣ್ಣದ ಓಕಳಿಯಲ್ಲಿ ಮಿಂದೆದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net