ನಗರದಲ್ಲಿ ಕರಡಿ ಸಂಚಾರ

Holi
Published on

ಕಾರವಾರ: ರಂಗಿನ ಹಬ್ಬ ಹೋಳಿಗೂ ಮುಂಚೆ ನಗರ ರಂಗೇರಿದೆ. ನಾಲ್ಕಾರು ಸುಗ್ಗಿ ತಂಡಗಳು, ವಿವಿಧ ವೇಷಧಾರಿಗಳು ಬೀದಿಗಳಲ್ಲಿ ಓಡಾಡುತ್ತಿದ್ದಾರೆ.

ನಗರದ ವಿವಿಧ ಭಾಗಗಳಲ್ಲಿ ಕರಡಿ, ರಾಕ್ಷಸ, ದೇವರ ಮುಖವಾಡ, ಪೋಶಾಕು ತೊಟ್ಟವರು ಓಡಾಟ ನಡೆಸಿ, ಮನರಂಜನೆ ನೀಡುತ್ತಿದ್ದಾರೆ. ಇನ್ನೊಂದೆಡೆ ವಿವಿಧ ಸಮಾಜಗಳ ಸುಗ್ಗಿ ತಂಡಗಳು ಸಂಚಾರ ಆರಂಭಿಸಿದ್ದು, ಆಯ್ದ ಮನೆಗಳಿಗೆ ಹೋಗಿ ಕೋಲಾಟ ನಡೆಸುತ್ತಿದ್ದಾರೆ. ತಾಲೂಕಿನ ತೋಡೂರು, ಕಡವಾಡ ಹೀಗೆ ವಿವಿಧೆಡೆಯ ಸುಗ್ಗಿ ತಂಡಗಳು ನಗರದಲ್ಲಿ ಸಂಚಾರ ನಡೆಸಿವೆ.

ಮನೆಗಳ ಎದುರು ಸುಗ್ಗಿ ತಂಡ ಗುಮಟೆ ಪಾಂಗ್ ಸದ್ದಿಗೆ ಕೋಲಾಟ ನಡೆಸುತ್ತದೆ. ನಂತರ ತಂಡಕ್ಕೆ ಮನೆಯ ಯಜಮಾನ ಅಕ್ಕಿ, ಕಾಯಿ, ಹಣ ಮುಂತಾದ ಭಕ್ಷೀಸು ನೀಡಿ ಗೌರವಿಸುತ್ತಾನೆ. ಹಾಲಕ್ಕಿ ಒಕ್ಕಲಿಗರು, ಮೀನುಗಾರರು, ಕೋಮಾರಪಂಥ ಹೀಗೆ ಕಾರವಾರ, ಅಂಕೋಲಾದ ವಿವಿಧ ಗ್ರಾಮಗಳ ಸುಗ್ಗಿ ತಂಡಗಳು ಎರಡೂ ತಾಲೂಕುಗಳಲ್ಲಿ ಓಡಾಟ ನಡೆಸುತ್ತವೆ.

ಸುಗ್ಗಿ ಕುಣಿತಕ್ಕೆ ತನ್ನದೇ ಆದ ಸಂಪ್ರದಾಯ ಹಾಗೂ ಪವಿತ್ರ ಭಾವನೆ ಇದೆ. ಹೋಳಿ ಹುಣ್ಣಿಮೆಗೆ ಏಳು ದಿನ ಮುಂಚೆ ಊರ ಗುನಗರು ಅಥವಾ ಬುದವಂತದ ಮನೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ಸುಗ್ಗಿ ಮೇಳ ಹೊರಡುತ್ತದೆ. ಸುಗ್ಗಿ ತಂಡದಲ್ಲಿ ಪಾಲ್ಗೊಂಡವರು ಸಾರಾಯಿ ಕುಡಿಯುವುದಿಲ್ಲ. ಎಲ್ಲೆಂದರಲ್ಲಿ ಊಟ ಮಾಡುವುದಿಲ್ಲ. ಕಾಲಿಗೆ ಚಪ್ಪಲಿ ಹಾಕುವುದಿಲ್ಲ. ಪಗಡೆಯನ್ನು ದೇವರಂತೆ ಪೂಜಿಸುತ್ತಾರೆ. ತಮ್ಮ ಸಮುದಾಯದ ಅಥವಾ ಸಮುದಾಯದ ಜತೆ ಸಂಬAಧ ಇರುವವರ ಮನೆಗೆ, ಆಯ್ದ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುವ ವಾಡಿಕೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net