ಹೊಳೆನರಸೀಪುರದಲ್ಲಿ ವಾಡಿಕೆಗಿಂತ ಅಧಿಕ ಮಳೆ

Published on

 ಸಹಾಯಕ ಕೃಷಿ ನಿರ್ದೇಶಕಿ ಬಿ.ಎಂ.ಸವಿತಾ ಮಾಹಿತಿ

ಹೊಳೆನರಸೀಪುರ: ತಾಲೂಕಿನಲ್ಲಿ ಪೂರ್ವ ಮುಂಗಾರು ಪ್ರಾರಂಭವಾಗಿದ್ದು ಮೇ 29ರವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಬಿ.ಎಂ.ಸವಿತಾ ತಿಳಿಸಿದ್ದಾರೆ.

ವಾಡಿಕೆ ಮಳೆ 167.9 ಮಿ.ಮೀ. ಮಳೆ ಅವಶ್ಯಕತೆ ಇದ್ದು, 274.9 ಮಿ.ಮೀ. ಮಳೆಯಾಗಿದ್ದು, ಶೇ.64 ಮಳೆ ಹೆಚ್ಚಾಗಿರುತ್ತದೆ. ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗಿದ್ದು 83.8 ಮಿ.ಮೀ. ಮಳೆಯಾಗುವ ಮೂಲಕ ರೈತರಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಪೂರ್ವ ಮುಂಗಾರು ಮಳೆ ಉತ್ತಮವಾಗಿ ಆಗಿರುವುದರಿಂದ ಬಿತ್ತನೆಗೆ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ತಾಲೂಕಿನಲ್ಲಿ 3,200 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗುತ್ತಿದ್ದು 1600 ಹೆಕ್ಟೇರ್ ತಂಬಾಕು , 4280 ಅಲಸಂದೆ, 550 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಮುಸುಕಿನ ಜೋಳ, 20 ಹೆಕ್ಟೇರ್ ಹೆಸರು, 40 ಹೆಕ್ಟೇರ್‌ನಲ್ಲಿ ಎಳ್ಳು ಬಿತ್ತನೆಯಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರೈತರ ಬೆಳೆಗಳಿಗೆ ಅವಶ್ಯಕತೆ ಇರುವ ರಾಸಾಯನಿಕ ಗೊಬ್ಬರ ದಾಸ್ತಾನು ಇದೆ. ರೈತರಿಗೆ ರಸಗೊಬ್ಬರ ಗಳ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ. ಈಗಾಗಲೇ ಪರಿಕರ ಮಾರಾಟಗಾರರ ಸಭೆ ಕರೆದು ರಸಗೊಬ್ಬರಗಳನ್ನು ನಿಗದಿತ ಬೆಲೆಗೆ ಮಾರುವಂತೆ ಹಾಗೂ ಯಾವುದೇ ಕೃತಕ ಅಭಾವ ಸೃಷ್ಟಿ ಮಾಡದಂತೆ ಎಚ್ಚರಿಕೆಯನ್ನು ನೀಡಲಾಗಿದೆ. ರೈತರು ಈ ಸಂಬಂಧವಾಗಿ ಯಾವುದೇ ದೂರುಗಳಿದ್ದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದರು.

ಇತ್ತೀಚಿನ ದಿನಗಳಲ್ಲಿ ತಾಲೂಕಿನಾದ್ಯಂತ ಮುಸುಕಿನ ಜೋಳದ ಬೆಳೆಯಲ್ಲಿ ಬಿಳಿ ಸುಳಿರೋಗ, ಕೇದಿಗೆ ರೋಗ ವ್ಯಾಪಕವಾಗಿ ಹರಡುತ್ತಿದೆ. ರೈತರು ಒಂದು ಅಥವಾ ಎರಡು ಗಿಡದಲ್ಲಿ ಕಂಡು ಬಂದರೆ ತಕ್ಷಣವೇ ರೋಗಭಾದಿತ ಗಿಡಗಳನ್ನು ಸುಟ್ಟು ನಾಶಪಡಿಸಬೇಕು. ಛಿಠಿಚ್ಝಚ್ಡಢ್ಝ 4ಡಿ + ಞಛ್ಞ್ಚಿಟ್ಢಛಿಚಿ 64 ಡಿ ಅನ್ನು ಪ್ರತಿ ಲೀಟರ್ ನೀರಿಗೆ ಎರಡು ಗ್ರಾಂ ಸೇರಿಸಿ ಸಿಂಪಡಣೆ ಮಾಡಬೇಕು. ಈ ಬಿತ್ತನೆ ಕೈಗೊಂಡಿರುವ ರೈತರು ಬಿತ್ತನೆಗೆ ಮೊದಲು ಬೀಜವನ್ನು ಶಿಲೀಂಧ್ರ ನಾಶಕದಿಂದ ಬೀಜೋಪಚಾರ ಮಾಡಬೇಕು ಎಂದು ತಿಳಿಸಿದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ 28218 ರೈತರು ನೋಂದಣಿ ಮಾಡಿಕೊಂಡಿದ್ದಾರೆ. 2685 ಜನ ರೈತರು ಇನ್ನೂ ಈಕೆವೈಸಿ ಮಾಡಿಸಿಲ್ಲ. ಈ ಕೆವೈಸಿ ಮಾಡಿಸದ ರೈತರು ಕೂಡಲೇ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಮಾಡಿಸಿಕೊಳ್ಳುವಂತೆ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net