ಸಾಧನೆ ಮೂಲಕ ಉನ್ನತ ಹುದ್ದೆ ಅಲಂಕರಿಸಿ

Hold a high position through achievement
ತೇರದಾಳ ತಾಲೂಕಿನ ಸಸಾಲಟ್ಟಿ ಗ್ರಾಮದ ಜ್ಞಾನಯೋಗಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭವನ್ನು ಮಗಯ್ಯ ಹಿರೇಮಠ ಉದ್ಘಾಟಿಸಿದರು. ಜಕ್ಕಪ್ಪ ಜಲಪೂರ, ಎಂ.ಎಸ್. ಮೂಡಸಿ ಮತ್ತಿತರರಿದ್ದಾರೆ.
Published on

ತೇರದಾಳ: ಮುಗ್ಧ ಮನಸ್ಸುಗಳನ್ನು ಶಿಕ್ಷಣವೆಂಬ ಉಳಿಯಿಂದ ಕೆತ್ತಿ ಶಿಲೆಯನ್ನಾಗಿಸುವ ಗುರು ಜಗತ್ತಿನ ಶ್ರೇಷ್ಠ ವ್ಯಕ್ತಿ ಎಂದು ಮಗಯ್ಯ ಹಿರೇಮಠ ಹೇಳಿದರು.

ತಾಲೂಕಿನ ಸಸಾಲಟ್ಟಿ ಗ್ರಾಮದ ಜ್ಞಾನಯೋಗಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೊಜಿಸಿದ್ದ ದ್ವಿತೀಯ ಪಿಯು ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಠಿಣ ಪರಿಶ್ರಮದಿಂದ ಗುರಿ ತಲುಪಲು ಸಾಧ್ಯ. ಸಾಧನೆಯ ಮೂಲಕ ಉನ್ನತ ಹುದ್ದೆ ಅಲಂಕರಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಆಡಳಿತಮಂಡಳಿಯ ಡಾ.ಸುರೇಶ ಸಲಬನ್ನವರ, ಪ್ರಾಚಾರ್ಯ ಎಂ.ಎಸ್.ಮೂಡಸಿ,ಉಪನ್ಯಾಸಕ ಪ್ರವೀಣ ಬುದ್ನಿ ಮಾತನಾಡಿದರು. ಜಕ್ಕಪ್ಪ ಜಲಪೂರ, ಸಂಸ್ಥೆ ಅಧ್ಯಕ್ಷ ಮಹಾಲಿಂಗ ಶೇಗುಣಸಿ, ಮುಖ್ಯ ಶಿಕ್ಷಕ ಸಿದ್ದು ಕಮದಿನ್ನಿ ಮತ್ತಿತರರಿದ್ದರು.

ವಿದ್ಯಾರ್ಥಿಗಳಿಗೆ ದೀಪದಾನದ ಜತೆಗೆ ಉಡುಗೊರೆ ಕೊಡುವುದರ ಮೂಲಕ ವಿಶೇಷವಾಗಿ ಬಿಳ್ಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net