ಯೋಗದಿಂದ ಆರೋಗ್ಯ ವೃದ್ಧಿ

HLK YOGA 30
Published on

ಹೊಳಲ್ಕೆರೆ: ದೈಹಿಕ ಹಾಗೂ ಮಾನಸಿಕ ವೃದ್ಧಿಗೆ ಯೋಗ ಮದ್ದು ಎಂದು ಉಪಪ್ರಾಚಾರ್ಯ ಡಾ.ಕೆ.ವಿ.ರಾಜಶೇಖರ್ ಹೇಳಿದರು.

ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಸೂರದಾಸ್ ಜೀ ಅರ ಪುಣ್ಯಾರಾಧನೆ ಹಾಗೂ ನಾಟಕೋತ್ಸವದ ಅಂಗವಾಗಿ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದಲ್ಲಿ ಸೋಮವಾರ ಆಯೋಜಿಸಿದ್ದ ಯೋಗ ಶಿಕ್ಷಣ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಇಂದು ಮನಸ್ಸುಗಳು ಕಲುಷಿತಗೊಂಡಿವೆ. ನಾವು ಬಳಸುವ ಆಹಾರ ವಿಷಯುಕ್ತಗೊಂಡಿವೆ, ಅಶುದ್ಧ ಆಹಾರ ಸೇವನೆಯಿಂದ ದೈಹಿಕ ಬೆಳವಣಿಗೆಯಾಗದೇ ಮನಸ್ಸು ಕೂಡ ನಿಯಂತ್ರಣ ತಪ್ಪಿವೆ. ನಿತ್ಯ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ ಲಭಿಸುತ್ತದೆ ಎಂದರು.

ಉಪನ್ಯಾಸಕ ಪ್ರೊ.ರಘುನಾಥ್ ಮಾತನಾಡಿ, ಪ್ರಾಣಾಯಾಮ ಆಂತರಿಕವಾಗಿ ನಮ್ಮನ್ನು ಶುದ್ಧಗೊಳಿಸುತ್ತವೆ ಎಂದು ತಿಳಿಸಿದರು.

ಯೋಗ ತರಬೇತುದಾರ ಸಂತೋಷ್ ಕುಮಾರ್ ಮಾತನಾಡಿದರು. ಅನಾಥ ಸೇವಾಶ್ರಮದ ವ್ಯವಸ್ಥಾಪಕ ಎಚ್.ಎಸ್.ಸಿದ್ದರಾಮಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಪ್ರಾಚಾರ್ಯ ಟಿ.ವೆಂಕಟೇಶ್, ಕ್ಷೇಮಪಾಲಕರಾದ ಎಂ.ಎನ್.ಮಲ್ಲಪ್ಪ, ಈರಮ್ಮ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಮೋಹನ್‌ಕುಮಾರ್ ಸ್ವಾಗತಿಸಿದರು. ಟಿ.ಲೋಕೇಶ್ ವಂದಿಸಿದರು. ಬಿ.ಪಿ.ಚಂದ್ರಶೇಖರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net