

ಹೊಳಲ್ಕೆರೆ: ಪ್ರತಿ ವರ್ಷದಂತೆ ಈ ಬಾರಿಯೂ ಪಟ್ಟಣ ಹೊರವಲಯದ ಗ್ರಾಮ ದೇವತೆ ಶ್ರೀ ಕುಕ್ವಾಡೇಶ್ವರಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಸೋಮವಾರ ರಾತ್ರಿ ಶ್ರೀ ಬೀರಲಿಂಗೇಶ್ವರ ಸ್ವಾಮಿ ರಥೋತ್ಸವ ಜರುಗಿತು. ಇಡೀ ರಾತ್ರಿ ಶ್ರೀಸ್ವಾಮಿಯ ಮೆರವಣಿಗೆ ಮತ್ತು ವಿವಿಧ ಪೂಜಾ ವಿಧಿಗಳು ನೆರವೇರಿದವು.
ಮಂಗಳವಾರ ಬೆಳಗ್ಗೆ 10ಕ್ಕೆ ಮುಖ್ಯ ಬೀದಿಗಳಲ್ಲಿ ಬೀರಲಿಂಗೇಶ್ವರ ಸ್ವಾಮಿ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಿತು. ಸಾವಿರಾರು ಭಕ್ತರು ಕುಕ್ವಾಡೇಶ್ವರಿ ದೇವಾಲಯ ಆವರಣದಲ್ಲಿ ತಂಗಿ ವಿವಿಧ ಬಗೆಯ ಪೂಜೆಗಳನ್ನು ನೆರವೇರಿಸಿದರು.