ಹೊಳಲ್ಕೆರೆ: ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟಲು ಮನೆಯಲ್ಲಿರುವುದೇ ಮದ್ದು ಎಂದು ವೃತ್ತ ನಿರೀಕ್ಷಕ ರವೀಶ್ ತಿಳಿಸಿದರು.
ಚಿತ್ರಹಳ್ಳಿ ಗೇಟ್ ಗ್ರಾಪಂ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕರೆಲ್ಲರು ಶುಚಿತ್ವಗೆ ಆದ್ಯತೆ ನೀಡಬೇಕು ಎಂದರು. ಚಿತ್ರಳ್ಳಿ ಪೊಲೀಸ್ ಉಪ ನಿರ್ದೇಶಕ ಮಂಜುನಾಥ್ ಇತರರಿದ್ದರು.